ಮುಂಬೈ, ಜ 19 (DaijiworldNews/KP): ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ.
ಬ್ರಾಂಡ್ ಶೂಟ್ ಕಾರ್ಯಕ್ರಮವೊಂದರಲ್ಲಿ ಮದುವೆಯ ನೆನಪುಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ತಾನು ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಮಂಗಳಸೂತ್ರದ ಅರ್ಥ ಏನು ಎಂಬುದರ ಕಲ್ಪನೆ ಮಾಡಿಕೊಂಡೆ ಬೆಳೆದಿದ್ದೇ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು ಮತ್ತು ಅದ್ಭುತವಾಗಿತ್ತು, ಆ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಸೂತ್ರದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದಿದ್ದಾರೆ.
ಇನ್ನು ಮಂಗಳ ಸೂತ್ರದಲ್ಲಿರುವ ಕಪ್ಪು ಮಣಿಯ ಪ್ರಮುಖ್ಯತೆಯ ಬಗ್ಗೆ ಹೇಳಿದ್ದು, ಕಪ್ಪು ಮಣಿಯು ದುಷ್ಟತನವನ್ನು ತೊಡೆದು ಹಾಕಿ ತನ್ನನ್ನು ತಾನು ಕಾಪಾಡಿಕೊಳ್ಳಲು ಸಹಾಕರಿಸುತ್ತದೆ ಎಂದು ಹೇಳಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅವರು 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಯಾವಗಲು ಫ್ಯಾಶನ್ ಮೂಲಕ ಸುದ್ದಿಯಲ್ಲಿರುತ್ತಾರೆ.