ಹೈದರಾಬಾದ್, ಜ 18 (DaijiworldNews/KP): ತಮಿಳುನಾಡು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಜನಿಕಾಂತ್ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ತಮ್ಮ ವಿಚ್ಛೇದನ ಘೋಷಿಸಿದ್ದಾರೆ. ಇದರೊಂದಿಗೆ ಅವರಿಬ್ಬರ 18 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.
ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ಸಪ್ತಪದಿ ತುಳಿದಿದ್ದು,ವಿವಾಹವಾದಾಗ ಧನುಷ್ ಅವರಿಗೆ 21 ವರ್ಷವಾಗಿದ್ದರೆ ಐಶ್ವರ್ಯಾ ಅವರಿಗೆ 23 ವರ್ಷ ವಯಸ್ಸು. ಪರಸ್ಪರ ಪ್ರಿತಿಸಿ ಮದುವೆಯಾಗಿದ್ದ ಜೋಡಿ. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಅದರೆ ಅವರ ಸುದೀರ್ಘ ದಾಂಪತ್ಯಕ್ಕೆ ಇದೀಗ ಅಂತ್ಯ ಹಾಡಿದ್ದಾರೆ.
ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ಟ್ವೀಟ್ ಮಾಡಿರುವ ಅವರು, ನಮ್ಮ ಖಾಸಗಿತನಕ್ಕೆ ಗೌರವ ನೀಡಿ ಎಂದಿದ್ದಾರೆ. ಇದು ಧನುಷ್ ಮತ್ತು ರಜನಿಕಾಂತ್ ಅಭಿಮಾನಿಗಳಿಗೆ ಅಚ್ಚರಿಯನ್ನು ಉಂಟು ಮಾಡಿದೆ.
ರಜನಿಕಾಂತ್ ಅವರ ಮಕ್ಕಳಾದ ಐಶ್ವರ್ಯಾ ಮತ್ತು ಸೌಂದರ್ಯಾ ಇಬ್ಬರಿಗೂ ವಿಚ್ಛೇದನವಾಗಿದೆ. ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯಾ ಅವರು 2010ರಲ್ಲಿ ಅಶ್ವಿನ್ ರಾಮ್ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು. ಆ ದಂಪತಿಗೆ ವೇದ್ ಕೃಷ್ಣ ಎಂಬ ಗಂಡು ಜನಿಸಿತ್ತು. ಆದರೆ ಇಬ್ಬರ ನಡುವಿನ ಹೊಂದಾಣಿಕೆಯ ಕೊರತೆಯಿಂದ 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ದೂರ ಆದರು. ಆ ಬಳಿಕ ವಿಶ್ಗನ್ ವನಂಗಮುಡಿ ಅವರನ್ನು 2019ರಲ್ಲಿ ಸೌಂದರ್ಯಾ ಮದುವೆ ಆಗಿದ್ದಾರೆ. ತಮಗಿಂತಲೂ ವಯಸ್ಸಿನಲ್ಲಿ ಎರಡು ವರ್ಷ ಹಿರಿಯರಾಗಿದ್ದ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು ಪ್ರೀತಿಸಿ 2004ರ ನವೆಂಬರ್ನಲ್ಲಿ ವಿವಾಹವಾಗಿದ್ದರು. ಆದರೆ ಈ ಜೋಡಿಯು ಕೂಡ ವಿಚ್ಛೇದನ ನೀಡಿರುವುದಾಗಿ ತಿಳಿಸಿದ್ದಾರೆ.