ಮುಂಬೈ, ಜ 15 (DaijiworldNews/HR): ನಟ ನಾಗ ಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಪಡೆದ ನಂತರದಲ್ಲಿ ಇಬ್ಬರೂ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ.ಆದರೆ ಇತ್ತೀಚೆಗೆ ನಾಗ ಚೈತನ್ಯ ಅವರು ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದು, ಈಗ ಸಮಂತಾ ಬಗ್ಗೆ ಅವರು ಒಳ್ಳೆಯ ಮಾತುಗಳನ್ನು ಆಡಿದ್ದಾರೆ ಸು ಎಂಬ ಸುದ್ದಿ ಸಾಕಷ್ಟು ಚರ್ಚೆ ಆಗುತ್ತಿದೆ.
ಸಮಂತಾ ಹಾಗೂ ನಾಗ ಚೈತನ್ಯ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದು,ಇವರು ಒಟ್ಟಾಗಿ ನಟಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಇವರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಜನವರಿ 14ರಂದು ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಸಿನಿಮಾ ತೆರೆಗೆ ಬಂದಿದ್ದು, ಈ ಬಗ್ಗೆ ಮಾಧ್ಯಮಗಳು ನಾಗ ಚೈತನ್ಯರನ್ನು ಪ್ರಶ್ನಿಸಿದ್ದು, ನೀವು ತೆರೆಮೇಲೆ ಯಾವ ನಟಿಯ ಜತೆ ಉತ್ತಮ ಕೆಮಿಸ್ಟ್ರಿ ಹೊಂದಿದ್ದೀರಿ ಎಂದು ಕೇಳಿದ್ದು, ಇದಕ್ಕೆ ನಾಗ ಚೈತನ್ಯ ಸಮಂತಾ ಅವರ ಹೆಸರನ್ನು ಹೇಳಿದ್ದು, ಈ ಮಾತನ್ನು ಕೇಳಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.
ಇನ್ನು ಇತ್ತೀಚೆಗೆ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತನಾಡಿದ್ದು, ಸಮಂತಾ ಖುಷಿಯಾಗಿದ್ದಾಳೆ ಎಂದರೆ ನನಗೂ ಸಂತೋಷವೇ ಎಂದು ಹೇಳಿದ್ದರು.