ಹೊಸದಿಲ್ಲಿ, ಜ 14 (DaijiworldNews/AN): ಬಾಲಿವುಡ್ನ ಡ್ರೀಮ್ ಗರ್ಲ್ ಎಂದೇ ಹೆಸರುವಾಸಿಯಾಗಿರುವ ಹಿರಿಯ ನಟಿ ಹೇಮಾ ಮಾಲಿನಿಯವರು ಪೊಂಗಲ್ ಆಚರಣೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.
ಈ ಫೋಟೊದಲ್ಲಿ ಆಕೆ ಗುಲಾಬಿ ಬಣ್ಣದ ಸೀರೆಯನ್ನುಟ್ಟು ಸುಂದರವಾಗಿ ಮಿಂಚುತ್ತಿದ್ದಾರೆ.
ಅಡುಗೆ ಮನೆಯಲ್ಲಿ ಪೊಂಗಲ್ನ್ನು ತಯಾರಿಸುತ್ತಿರುವ ಪೋಟೊವೊಂದನ್ನು ಶೇರ್ ಮಾಡಿಕೊಂಡಿರುವ ಅವರು, "ಇಂದು ನಾವು ಕುಟುಂಬದೊಂದಿಗೆ ಪೊಂಗಲ್ ಹಬ್ಬವನ್ನು ಆಚರಿಸುತ್ತಿದ್ದು, ಇಲ್ಲಿ ನಾನು ಮನೆಯಲ್ಲಿ ಪೊಂಗಲ್ ತಯಾರಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಇನ್ನು ಹೇಮಾ ಮಾಲಿನಿ ಪುತ್ರಿ, ನಟಿ ಇಶಾ ಡಿಯೋಲ್ ಕೂಡ ತಮ್ಮ ತಾಯಿಯಂತೆಯೇ ಪೊಂಗಲ್ ಮಾಡುತ್ತಿರುವ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, “ದೇಶವು ಸಕ್ರಾಂತಿ, ಪೊಂಗಲ್, ಬಿಹು ಮತ್ತು ಉತ್ತರಾಯಣದ ಸುಗ್ಗಿಯ ಹಬ್ಬಗಳನ್ನು ಆಚರಿಸುತ್ತಿದೆ. ನಾನು ನನ್ನ ಕುಟುಂಬಕ್ಕಾಗಿ ಪೊಂಗಲ್ ತಯಾರಿಸುತ್ತಿದ್ದೇನೆ, ಇದು ನನ್ನ ಮಗಳಿಗೆ ಅಚ್ಚುಮೆಚ್ಚಾಗಿದೆ." ಎಂದು ಹೇಳುತ್ತಾ ಹಬ್ಬದ ಶುಭಾಶಯವನ್ನು ತಿಳಿಸಿದರು.