ಮುಂಬೈ, ಜ 12 (DaijiworldNews/AN): ಸುಮಾರು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಜೋಡಿ ದೂರವಾಗಲು ನಿರ್ಧರಿಸಿದ್ದು, ಇವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ಜೋಡಿಯ ಡೇಟಿಂಗ್ ವದಂತಿಗಳು ಹುಟ್ಟಿಕೊಂಡಾಗಿನಿಂದ ತೀವ್ರ ಚರ್ಚೆಗೆ ಒಳಗಾಗಿದ್ದರು. ಇದರ ಬಳಿಕ ಶೀಘ್ರದಲ್ಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಪರಸ್ಪರ ಪ್ರೀತಿಸುವ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಜನರಿಗೆ ಖಾತರಿಪಡಿಸಿದ್ದರು.
ಬಾಲಿವುಡ್ ಲೈಫ್ ಡಾಟ್ ಕಾಮ್ ಪ್ರಕಾರ, ಮಲೈಕಾ ಅರೋರಾ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು, ಆರು ದಿನಗಳಿಂದ ಮಲೈಕಾ ಅರೋರಾ ಮನೆಯಲ್ಲಿ ಒಬ್ಬರೇ ಇದ್ದಾರೆ ಎನ್ನಲಾಗಿದೆ.
"ನನ್ನ ಮತ್ತು ಮಲೈಕಾ ನಡುವಿನ ವಯಸ್ಸಿನ ಅಂತರಕ್ಕಾಗಿ ಟ್ರೋಲ್ ಆಗಿದ್ದು, ನನಗೆ 36 ವರ್ಷ, ಮಲೈಕಾಗೆ 48 ವರ್ಷ. ವಯಸ್ಸಿನ ಆಧಾರದ ಮೇಲೆ ಸಂಬಂಧದ ಕುರಿತು ಮಾತನಾಡುವುದು ಸರಿಯಲ್ಲ" ಎಂದು ಈ ಹಿಂದೆ ಅರ್ಜುನ್ ಕಪೂರ್ ಹೇಳಿದ್ದರು.
ಇನ್ನು ನಟಿ ಮಲೈಕಾ ಅರೋರಾ 1998ರಲ್ಲಿ ನಟ ಅರ್ಬಾಜ್ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ದಂಪತಿ 2016ರಲ್ಲಿ ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದೆ. ಈ ದಂಪತಿಗೆ ಅರ್ಹಾನ್ ಎಂಬ ಪುತ್ರನಿದ್ದಾನೆ.