ಮುಂಬೈ ಜ, 09 (DaijiworldNews/AN): ಇತ್ತೀಚೆಗೆ ವಿವಾಹವಾದ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ರವರ ದಾಂಪತ್ಯ ಜೀವನಕ್ಕೆ ಇಂದಿಗೆ ಒಂದು ತಿಂಗಳು ತುಂಬಿದ್ದು, ಈ ಖುಷಿಯ ಸಂದರ್ಭದಲ್ಲಿ ಇಬ್ಬರೂ ತಮ್ಮ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ "ಎಂದೆಂದಿಗೂ ಹೀಗೇ ಸಾಗೋಣ" ಎಂದು ವಿಕ್ಕಿ ಕೌಶಲ್ ಫೊಟೋವೊಂದನ್ನು ಹಂಚಿಕೊಂಡಿದ್ದರೆ, ಹ್ಯಾಪಿ ಒನ್ ಮಂಥ್ ಮೈ.. ಎಂದು ಹೃದಯದ ಚಿತ್ರದೊಂದಿಗೆ ಕತ್ರಿನಾ ಕೈಫ್ ಶೀರ್ಷಿಕೆಯೊಂದನ್ನು ಹಂಚಿಕೊಂಡಿದ್ದಾರೆ.
ಅನೇಕ ಗಣ್ಯರು ಕೂಡ ದಂಪತಿಗೆ ಶುಭ ಹಾರೈಸಿ, ಅಭಿಮಾನಿಗಳು ಕಮೆಂಟ್ಗಳ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.