ಮುಂಬೈ, ಜ.01 (DaijiworldNews/PY): ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವರ್ತಮಾನದ ಘಟನೆಗಳಿಗೆ ತಮ್ಮದೇ ಆದ ವಿಧಾನದಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಇದರಿಂದ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ಡಿಸೆಂಬರ್ 25ರಂದು ನಟ ಸಲ್ಮಾನ್ ಖಾನ್ಗೆ ಹಾವು ಕಚ್ಚಿದ್ದು, ದೊಡ್ಡ ಸುದ್ದಿಯಾಗಿತ್ತು. ಫಾರ್ಮ್ ಹೌಸ್ನಲ್ಲಿ ಸಲ್ಮಾನ್ ಖಾನ್ಗೆ ಹಾವು ಕಚ್ಚಿದ ಪರಿಣಾಮ ಅವರು ಆಸ್ಪತ್ರೆಗೂ ದಾಖಲಾಗಿದ್ದರು. ಅವರ ಹುಟ್ಟುಹಬ್ಬಕ್ಕೆ ಎಡು ದಿನಗಳಿರುವಾಗಲೇ ಈ ಘಟನೆ ನಡೆದಿದ್ದು, ಅಭಿಮಾನಗಳಿಗೆ ಆತಂಕವಾಗಿತ್ತು.
ಡಿ.27ರಂದು ಸಲ್ಮಾನ್ ಖಾನ್ ಹುಟ್ಟುಹಬ್ಬದಂದು ಮಾತನಾಡಿದ್ದು, ಆ ದಿನ ಏನಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೇ, ತಾವೀಗ ಕ್ಷೇಮ ಎಂದೂ ಹೇಳಿ ಪ್ರಕರಣಕ್ಕೆ ತೆರೆ ಎಳೆದಿದ್ದರು. ಆದರೆ, ಈ ಘಟನೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಡವಾಗಿ ತಮ್ಮದೇ ವಿಧಾನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಆರ್ಜಿವಿ ಮೀಮ್ವೊಂದನ್ನು ಹಂಚಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಆರ್ಜಿವಿ ಕಾಲೆಳೆದ ರೀತಿಗೆ ನಕ್ಕಿದ್ದಾರೆ. ಒಂದು ಕಾರ್ಟೂನ್ ಅನ್ನು ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಅದರಲ್ಲಿ ಹಾವೊಂದು ನ್ಯಾಯಾಲಯದ ಕಟಕಟೆಯಲ್ಲಿದ್ದು, ಕಚ್ಚಿರೋದು ನಾನಲ್ಲ, ನನ್ನ ಡ್ರೈವರ್ ಎಂದು ವಾದ ಮಾಡುವಂತೆ ರಚಿಸಲಾಗಿದೆ.
2002ರ ಸೆಪ್ಟೆಂಬರ್ನಲ್ಲಿ ಸಲ್ಮಾನ್ ಖಾನ್ ಅವರ ಹಿಟ್ ಆಂಡ್ ರನ್ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಕಾರ್ಟೂನ್ ರಚಿಸಲಾಗಿದೆ.