ಮಂಗಳೂರು, ಡಿ. 26 (DaijiworldNews/SM): ಡಿಸೆಂಬರ್ 24ರಂದು ಕರಾವಳಿಯಾದ್ಯಂತ ತೆರೆ ಕಂಡ ಏರೆಗಾವುಯೇ ಕಿರಿಕಿರಿ ತುಳು ಚಿತ್ರದ ಅಬ್ಬರ ಜೋರಾಗಿದೆ. ಮಂಗಳೂರು ಸೇರಿದಂತೆ ಕರಾವಾಳಿಯ ಚಿತ್ರ ಮಂದಿರಗಳಲ್ಲಿ ಚಿತ್ರ ತನ್ನದೇ ಹವಾ ಮೂಡಿಸಿದೆ. ಬಿಡುಗಡೆಗೊಂಡ ಮೊದಲ ದಿನವೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಚಿತ್ರ ಶಕ್ತವಾಗಿದೆ.
ಮಂಗಳೂರಿನ ಸಿನೆಪಾಲಿಸ್ ಹಾಗೂ ಭಾರತ್ ಸಿನಿಮಾಸ್ ಚಿತ್ರ ಮಂದಿರಗಳಲ್ಲಿ ಚಿತ್ರದ ಅಬ್ಬರ ಹೆಚ್ಚಿದ್ದು, ದಿನದ ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇನ್ನು ರಜಾ ದಿನವಾಗಿರುವ ಹಿನ್ನೆಲೆಯಲ್ಲೂ ಪ್ರೇಕ್ಷಕರ ದಂಡು ಏರೆಗಾವುಯೇ ಕಿರಿಕಿರಿ ವೀಕ್ಷಣೆಗೆ ಆಗಮಿಸುತ್ತಿದೆ. ತುಳು ಚಿತ್ರವೊಂದರ ಮೇಲೆ ಪ್ರೇಕ್ಷಕರು ಇಷ್ಟೊಂದು ಅಭಿಮಾನ ಇರಿಸಿದ್ದಕ್ಕೆ ನಿರ್ಮಾಪಕರು ಹಾಗೂ ಚಿತ್ರ ತಂಡದವರು ಪ್ರೇಕ್ಷಕರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಚಿತ್ರವು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಚಿತ್ರ ತಂಡದ ಅಭಿಪ್ರಾಯ ವ್ಯಕ್ತಪಡಿಸಿದೆ.
ವೇಗಸ್ ಫಿಲಂಸ್ ಸಂಸ್ಥೆಯಡಿಯಲ್ಲಿ ನಿರ್ಮಾಪಕ ರೋಶನ್ ವೇಗಸ್ ಚಿತ್ರ ನಿರ್ಮಿಸಿದ್ದು, ಹಿರಿಯ ನಿರ್ದೇಶಕ ರಾಮ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಾವಳಿಯ ಹೆಸರಾಂತ ತುಳು ಹಾಸ್ಯ ನಟರಾದ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಸಾಯಿ ಕೃಷ್ಣ, ಸಂದೀಪ್ ಇವರ ಹಾಸ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಕುಟುಂಬ ಸಹಿತರಾಗಿ ವೀಕ್ಷಿಸಬಹುದಾದ ಸಿನಿಮಾ ಇದಾಗಿದ್ದು, ಸಕ್ಕತ್ ಮನೋರಂಜನೆ ನೀಡುವುದರಲ್ಲಿ ಸಂಶಯವಿಲ್ಲ.