ಕೋಲ್ಕ್ಕತ್ತಾ, ಡಿ 24 (DaijiworldNews/MS): ಬಂಗಾಳಿ ನಟಿ ಮತ್ತು ಸಂಸದೆ ನುಸ್ರತ್ ಜಹಾನ್ ಅವರು ಮಗುವಿಗೆ ಜನ್ಮ ನೀಡಿದ ವಿಚಾರದ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ತಾಯ್ತನದ ಪ್ರಯಾಣವು ತನ್ನ ದಿಟ್ಟ ನಿರ್ಧಾರವಾಗಿತ್ತು ಎಂದು ನುಸ್ರತ್ ಸ್ಪಷ್ಟಪಡಿಸಿದ್ದಾರೆ.
ಇಷ್ಕ್ ವಿತ್ ನುಸ್ರತ್’ ಎಂಬ ಯೂಟ್ಯೂಬ್ ಚಾಟ್ ಶೋನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು "ನಾನು ಯಾವುದೇ ತಪ್ಪು ಮಾಡಿಲ್ಲ. ಇದು ನನ್ನ ಜೀವನ ಮತ್ತು ನನಗೆ ಬೇಕಾದ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ.ತಾಯಿಯಾಗುವ ನನ್ನ ನಿರ್ಧಾರವು ವಿವೇಕದಿಂದ ಕೂಡಿದೆ. ಈ ಬಗ್ಗೆ ನನಗೆ ಹೆಮ್ಮೆಯೂ ಇದೆ ಎಂದು ಹೇಳಿದ್ದಾರೆ.
ನಾನು ತುಂಬಾ ಧೈರ್ಯಶಾಲಿಯಾಗಿದ್ದೇನೆ ಮತ್ತು ನನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಒಂಟಿ ತಾಯಿಯಲ್ಲ, ನನ್ನಮಗ ಯಶಾನ್ಗೆ ತಂದೆ ಇದ್ದಾರೆ ಎಂದ ಅವರು ಇದಲ್ಲದೆ ಗರ್ಭಾವಸ್ಥೆಯಲ್ಲಿ ತನ್ನ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳ ಬಗ್ಗೆಯೂ ಮಾತನಾಡಿದರು.
ನುಸ್ರತ್ ಮಗುವಿನ ಜನನದ ಮಾಹಿತಿಯಲ್ಲಿ ಮಗುವಿನ ಹೆಸರು ಯಶಾನ್ ಹಾಗೂ ತಂದೆ ಹೆಸರು ದೇಬಾಸಿಸ್ ದಾಸ್ ಗುಪ್ತಾ (ಯಶ್ ದಾಸ್ ಗುಪ್ತಾ) ಎಂದು ಉಲ್ಲೇಖಿಸಿರುವುದು ತಿಳಿದು ಬಂದಿತ್ತು. ನುಸ್ರತ್ ಅವರು ನಟ ಯಶ್ ದಾಸ್ ಗುಪ್ತಾ ಜೊತೆ ಲಿವ್ ಇನ್– ರಿಲೇಶನ್ಶಿಪ್ನಲ್ಲಿ ಇದ್ದಾರೆ2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಿಲ್ ಜೈನ್ ಅವರೊಂದಿಗೆ ನುಸ್ರತ್ ಜಹಾನ್ ವಿವಾಹವಾಗಿದ್ದರು.