ದುಬೈ, ಡಿ 18 (DaijiworldNews/MS): ಮಾಡೆಲ್, ಕ್ರೀಡಾಪಟು, ಬಾಡಿ ಬಿಲ್ಡರ್, ಫ್ಯಾಶನ್ ಟ್ರೆಂಡ್ಸೆಟರ್ ಮತ್ತು ನಟನಾದ ಮಂಗಳೂರಿಯ ಪ್ರತಿಭೆ ಮನೋಜ್ ಶೆಟ್ಟಿ ಅವರಿಗೆ ಡಿಸೆಂಬರ್ 11, 2021 ರಂದು ದುಬೈನಲ್ಲಿ ಪ್ರತಿಷ್ಠಿತ ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ 2021- 22 ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಯಿಂಗ್ ಮುಸ್ಕಾನ್ ಆಯೋಜಿಸಿದ, ಮಿಸ್ಟರ್ ಯುಎಇ ಇಂಟರ್ನ್ಯಾಶನಲ್ - 2021 ಬಹು ಪ್ರತಿಭೆಯನ್ನು ಪ್ರದರ್ಶಿಸುವ ಈವೆಂಟ್ ಆಗಿದ್ದು ಮನೋಜ್ ಶೆಟ್ಟಿ ಎಲ್ಲಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡ ಎಂಆರ್ ಯುಎಇ ಇಂಟರ್ನ್ಯಾಷನಲ್ 2021 ಪ್ರಶಸ್ತಿಯನ್ನು ಗೆದ್ದರು.
ದುಬೈನ ರಾಡಿಸನ್ ರೆಡ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವರಾರು ದೇಶಗಳ ಸ್ಪರ್ಧಾಳುಗಳು ಭಾಗಿಯಾದರು.ಫ್ಯಾಷನ್ ಮತ್ತು ಮಾಡೆಲ್ ಉದ್ಯಮದ ಪ್ರಸಿದ್ಧರು ಪ್ರದರ್ಶನದ ತೀರ್ಪುಗಾರರಾಗಿದ್ದರು.ಈ ಕಾರ್ಯಕ್ರಮ ಯುಎಇ ಯ ಹಲವಾರು ಪ್ರಸಿದ್ಧ ಗಣ್ಯರಿಗೆ ಸಾಕ್ಷಿಯಾಯಿತು.
ಅಂತಿಮವಾಗಿ ಎಲ್ಲರ ಹೃದಯವನ್ನು ಗೆದ್ದ ನಂತರ, ಮನೋಜ್ ಎಂ.ಆರ್ ಯುಎಇ ಇಂಟರ್ನ್ಯಾಷನಲ್ 2021 ಪ್ರಶಸ್ತಿಯನ್ನು ಗೆದ್ದಕೊಂಡಿದ್ದಾರೆ. ಇದಲ್ಲದೆ ಅವರು ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ 2021 ಸ್ಪರ್ಧೆಯಲ್ಲಿ ಮಿಸ್ಟರ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ಸಹ ಗೆದ್ದರು.
ಮೂಲತಃ ಮಂಗಳೂರಿನವರಾದ ಮನೋಜ್ ಶೆಟ್ಟಿ ಶಾರದಾ ಶೆಟ್ಟಿ ಮತ್ತು ಪಡುಬಿದ್ರಿ ರಮೇಶ್ ಶೆಟ್ಟಿ ದಂಪತಿಯ ಪುತ್ರ, ಇವರು ಪೇಟೆಮನೆ ಪಟ್ಲೇರ್ ಸಂಜೀವ ಶೆಟ್ಟಿಯವರ ಮೊಮ್ಮಗನಾಗಿದ್ದಾರೆ.