ನವದೆಹಲಿ, ಡಿ.16 (Daijiworld/PY): ಬಾಲಿವುಡ್ನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳ ವಿವಾಹ ನಡೆಯುತ್ತಿವೆ. ಈ ನಡುವೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ವಿವಾಹದ ವಿಚಾರ ಸಹ ಕುತೂಹಲ ಮೂಡಿಸಿದೆ.
ಬುಧವಾರ ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಕುತೂಹಲ ಘಟನೆಯೊಂದು ನಡೆದಿದ್ದು, ನಮ್ಮಿಬ್ಬರ ವಿವಾಹ ಯಾವಾಗ ಎಂದು ರಣಬೀರ್ ಕಪೂರ್ ಅವರು ಆಲಿಯಾ ಭಟ್ ಬಳಿ ಕೇಳಿದ್ದಾರೆ. ಈ ವೇಳೆ ಆಲಿಯಾ, ಏಕೆ ನನ್ನನ್ನು ಹೀಗೆ ಕೇಳುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಇದು ಸದ್ದು ಮಾಡುತ್ತಿದೆ.
ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯ ಸಂದರ್ಭ ಇವರ ವಿವಾಹ ವಿಚಾರ ಪ್ರಸ್ತಾಪವಾಗಿದ್ದು, ಹಲವು ಸೆಲೆಬ್ರಿಟಿಗಳು ವಿವಾಹವಾಗುತ್ತಿದ್ದಾರೆ, ಹಾಗಾಗೀ ನೀವು ಸಹ ಬೇಗನೇ ವಿವಾಹವಾಗಿ ಎನ್ನುವ ಮಾತುಗಳು ಕೇಳಿ ಬಂದಿವೆ.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಕಳೆದ ವರ್ಷವೇ ವಿವಾಹವಾಗುದಕ್ಕೆ ತೀರ್ಮಾನಿಸಿದ್ದರು, ಆದರೆ, ಕೊರೊನಾ ಕಾಣದಿಂದ ವಿವಾಹ ಮುಂದೂಡಿದ್ದರು.