ಮುಂಬೈ, ಡಿ.08 (DaijiworldNews/PY): "ಯಶಸ್ವಿ ಮಹಿಳೆಯರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ವಿವಾಹವಾಗುತ್ತಿರುವ ವಿಚಾರ ನನಗೆ ಸಂತಸ ತಂದಿದೆ" ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.
ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್ (38) ಹಾಗೂ ವಿಕ್ಕಿ ಕೌಶಲ್ (33) ವಿವಾಹ ಸಮಾರಂಭವು ರಾಜಸ್ಥಾನದಲ್ಲಿ ನಡೆಯುತ್ತಿದೆ. ಈ ಮಧ್ಯೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ, "ಸಿನಿಮಾ ಉದ್ಯಮದ ಯಶಸ್ವಿ ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರನ್ನು ವಿವಾಹವಾಗುವ ಮೂಲಕ ತಮ್ಮ ಸಂಪ್ರದಾಯವನ್ನು ಮುರಿಯುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಲು ಸಂತಸವಾಗುತ್ತಿದೆ" ಎಂದಿದ್ದಾರೆ.
"ಕಿರಿಯ ವಯಸ್ಸಿನ ಮಹಿಳೆಯರನ್ನು ಶ್ರೀಮಂತ ಪುರುಷರು ವಿವಾಹವಾಗಿರುವ ಬಗ್ಗೆ ನಾವು ಕೇಳುತ್ತಲೇ ಬೆಳೆದಿದ್ದೇವೆ. ನಿರ್ದಿಷ್ಟ ವಯಸ್ಸಿನ ಬಳಿಕ ಮಹಿಳೆಯರಿಗೆ ವಿವಾಹ ಅಸಾಧ್ಯವಾಗಿತ್ತು. ಈ ಸಂಪ್ರದಾಯವನ್ನು ಭಾರತೀಯ ಚಿತ್ರೋದ್ಯಮದ ಪ್ರಮುಖ ಮಹಿಳೆಯರು ಮುರಿಯುತ್ತಿದ್ದಾರೆ" ಎಂದು ಹೇಳಿದ್ಧಾರೆ.
ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ವಿವಾಹವಾಗಿರುವುದನ್ನು ಸ್ಮರಿಸಬಹುದು.