ಮುಂಬೈ, ಡಿ.05 (DaijiworldNews/HR): ಫ್ಯೂಚರ್ ಗಂಡನಿಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೆಲವು ಷರತ್ತುಗಳನ್ನು ಹಾಕಿದ್ದು, ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ಈಗ ಸುದ್ದಿಯಾಗಿದೆ.
ಡಿಸೆಂಬರ್ 24ರಂದು ಸಾರಾ ನಟನೆಯ 'ರೇ' ಸಿನಿಮಾ ಕ್ರಿಸ್ಮಸ್ ಪ್ರಯುಕ್ತ ಬಿಡುಗಡೆ ಆಗುತ್ತಿದ್ದು, ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾರಾ ಬ್ಯುಸಿ ಆಗಿದ್ದಾರೆ.
ಇನ್ನು ತನ್ನ ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿರುವ ಅವರು, ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳುವುದರ ಜೊತೆಗೆ ಅವರ ಷರತ್ತು ಏನು ಎಂಬುದನ್ನು ಹೇಳಿದ್ದಾರೆ.
ಮದುವೆ ಆಗುವ ಹುಡುಗ ನನ್ನ ಹಾಗೂ ಅವರ ಅಮ್ಮನ ಜೊತೆ ವಾಸ ಮಾಡಬೇಕು. ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜೊತೆ ಇರಬೇಕು ಎಂದು ಹೇಳಿದ್ದಾರೆ.