ಮುಂಬೈ, ಡಿ.04 (DaijiworldNews/PY): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಪತಿ ರಣವೀರ್ ಸಿಂಗ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಣವೀರ್ ಸಿಂಗ್ ಅವರು ಆಗಾಗ ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ ತಮ್ಮ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.
ಇದೀಗ ದೀಪಿಕಾ ಪಡುಕೋಣೆ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪತಿ ರಣವೀರ್ ಸಿಂಗ್ ಅವರ ಕುರಿತು ಪೋಸ್ಟ್ವೊಂದನ್ನು ಹಾಕಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನನಗೆ ತಿಳಿಯದೇ ಇರುವ ವಿಚಾರಗಳ ಕುರಿತು ಹೇಳಿಕೊಡುವ ವ್ಯಕ್ತಿಗಿಂತ ಆಕರ್ಷಕವಾದುದು ಯಾವುದೂ ಇಲ್ಲ" ಎಂದು ಹಾಕಿರುವುದನ್ನು ಪೋಸ್ಟ್ನಲ್ಲಿ ಕಾಣಬಹುದು. ಈ ಪೋಸ್ಟ್ ಅನ್ನು ದೀಪಿಕಾ ಅವರು ರಣವೀರ್ ಸಿಂಗ್ಗೆ ಟ್ಯಾಗ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಕಪ್ಪು ಬಣ್ಣದ ಸೀರೆ ತೊಟ್ಟ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಈ ಫೋಟೋಗೆ ರಣವೀರ್ ಸಿಂಗ್ ಕಾಮೆಂಟ್ ಮಾಡಿದ್ದರು.