ಮಂಗಳೂರು, ಡಿ. 01 (DaijiworldNews/HR): ಮಹೇಂದ್ರ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ತುಳು ಸಿನಿಮಾ 'ಕಾರ್ಣಿಕದ ಕಲ್ಲುರ್ಟಿ' ಡಿಸೆಂಬರ್ 3 ರಂದು ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
ಮಾಣಿಲ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಈ ಸಿನಿಮಾದ ಚಿತ್ರೀಕರಣ ಕಾರ್ಕಳದ ಸುತ್ತಮುತ್ತ 70 ದಿನಗಳ ಕಾಲ ನಡೆದಿದ್ದು, ಇದರಲ್ಲಿ ಆರು ಹಾಡುಗಳಿದ್ದು, ಸಿನಿಪ್ರಿಯರನ್ನು ಆಕರ್ಷಿಸಲಿದೆ.
ಚಿತ್ರದ ಮುಹೂರ್ತ 2018 ರಲ್ಲಿ ಪಣೋಲಿಬೈಲ್ನಲ್ಲಿ ನಡೆದಿದ್ದು, ಚಿತ್ರದ ಮೊದಲ ಕೆಲವು ಭಾಗಗಳನ್ನು ಬಜಗೋಳಿ ಮತ್ತು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬೆಂಗಳೂರಿನಲ್ಲಿ ನಡೆದಿದೆ.
'ಫೀನಿಕ್ಸ್ ಫಿಲಂಸ್' ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಕಲ್ಲುರ್ಟಿ ಆಧಾರಿತ ಚಿತ್ರದ ಕಥೆಯನ್ನು ಮಹೇಂದ್ರಕುಮಾರ್ ಬರೆದಿದ್ದಾರೆ, ಸಂಭಾಷಣೆಯನ್ನು ಗಂಗಾಧರ್ ಕಿರೋಡಿಯನ್ ಮತ್ತು ಛಾಯಾಗ್ರಹಣವನ್ನು ಉಮಾಪತಿ ನಿರ್ವಹಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಗಂಗಾಧರ್ ಕಿರೋಡಿಯನ್ ಬರೆದಿದ್ದಾರೆ ಮತ್ತು ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಿನಿಮಾ ತಂಡ ಮಾಹಿತಿ ನೀಡಿದೆ.
ಇನ್ನು ರಮೇಶ್ ಭಟ್, ಶೈಲೇಂದ್ರ ಡಿಜೆ, ಚಾಂದಿನಿ ಅಂಚನ್, ಮಹೇಂದ್ರ ಕುಮಾರ್, ಶಾಲಿನಿ ಮರಕಡ ಮುಂತಾದವರು ತಾರಾಗಣದಲ್ಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಪ್ರಶಾಂತ್, ಶಾಲಿನಿ, ರಾಜ್ ಗೋಪಾಲ್ ರೈ, ವಸಂತ ಪೂಜಾರಿ ಉಪಸ್ಥಿತರಿದ್ದರು.