ಮಂಗಳೂರು, ನ. 28 (DaijiworldNews/HR): ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ತಮ್ಮ ಪುತ್ರ ಅಹಾನ್ ಶೆಟ್ಟಿ ಅವರೊಂದಿಗೆ ಡಿಸೆಂಬರ್ 3 ರಂದು ಬಿಡುಗಡೆಯಾಗಲಿರುವ ಅಹಾನ್ ಶೆಟ್ಟಿ ಅಭಿನಯದ ಬಾಲಿವುಡ್ ಸಿನಿಮಾ 'ತಡಪ್' ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದಾರೆ.
ಮಿಲನ್ ಲೂಥ್ರಿಯಾ ನಿರ್ದೇಶನದ 'ತಡಪ್' ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿರಿಸುತ್ತಿರುವ ಅಹಾನ್ಗೆ ಜೋಡಿಯಾಗಿ ತಾರಾ ಸುತಾರಿಯಾ ನಟಿಸುತ್ತಿದ್ದು, ಚಿತ್ರ ಡಿಸೆಂಬರ್ 3 ರಂದು ಬಿಡುಗಡೆಯಾಗಲಿದೆ.
ತುಳುವಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಸುನೀಲ್ ಶೆಟ್ಟಿ, 'ತಡಪ' ಚಿತ್ರವು ಡಿಸೆಂಬರ್ 3 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅಹಾನ್ ಶೆಟ್ಟಿ ಕಳೆದ ಒಂದು ವಾರದಿಂದ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈಗ ಕೊರೊನಾದ ನಡುವೆ ಸಿನಿಮಾ ಬಿಡುಗಡೆ ಮಾಡುವುದು ಸವಾಲಿನ ಸಂಗತಿಯಾಗಿದ್ದು, ಕೊರೊನಾದಿಂದಾಗಿ ನಾವು ಒಂದು ವರ್ಷ ಬಿಡುಗಡೆಗೆ ಕಾಯಬೇಕಾಯಿತು. ದೇವರ ಆಶೀರ್ವಾದವನ್ನು ಕೋರಿ ಮಂಗಳೂರಿಗೆ ಬಂದಿರುವುದು ಒಳ್ಳೆಯದು, ನಾನು ಯಾವಾಗಲೂ ಧರ್ಮಸ್ಥಳ, ಸುಬ್ರಹ್ಮಣ್ಯ, ಬಪ್ಪನಾಡು ಮತ್ತು ದುರ್ಗಾಪರಮೇಶ್ವರಿಯಲ್ಲಿ ದೇವರ ಆಶೀರ್ವಾದ ಪಡೆಯಲು ಬರುತ್ತೇನೆ. ಬಿಡುಗಡೆಗೂ ಮುನ್ನ ಅಹಾನ್ ಮಂಗಳೂರಿಗೆ ಬಂದು ದೇವರ ಆಶೀರ್ವಾದ ಪಡೆಯಲು ಇಚ್ಚಿಸಿದ್ದ" ಎಂದರು.
ಇನ್ನು ನಮ್ಮ ಕುಟುಂಬ ಚಿತ್ರರಂಗಕ್ಕೆ ಬಂದಿರುವುದು ಸಂತಸ ತಂದಿದೆ ಮತ್ತು ನಮ್ಮ ಕೆಲಸವನ್ನು ನಾವು ಇಷ್ಟ ಪಟ್ಟು ಆ ಬಗ್ಗೆ ಚರ್ಚಿಸುತ್ತೇವೆ ಅದು ಒಳ್ಳೆಯದು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಅಹಾನ್ ಶೆಟ್ಟಿ ಮಾತನಾಡಿ, 'ನನ್ನ ತಂದೆ ನನಗೆ ಸ್ಕ್ರಿಪ್ಟ್ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದು, ಅವರು ಯಾವಾಗಲೂ ನಾವು ಒಳ್ಳೆಯ ಮನುಷ್ಯರಾಗಬೇಕೆಂದು ನಮಗೆ ಹೇಳಿಕೊಟ್ಟಿದ್ದಾರೆ" ಎಂದರು.
ಇನ್ನು ಮುಂಬರುವ ಪ್ರಾಜೆಕ್ಟ್ಗಳ ಕುರಿತು ಮಾತನಾಡಿದ ಅಹಾನ್ ಶೆಟ್ಟಿ, 'ಕೆಲವು ಮಾತುಕತೆಯಲ್ಲಿದೆ ಮತ್ತು ಉತ್ತಮ ಆಫರ್ಗಳು ಬರುತ್ತಿದೆ" ಎಂದಿದ್ದಾರೆ.