ಮುಂಬೈ, ನ.22 (DaijiworldNews/HR): ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಜೋಡಿಗೆ ಇಂದು 12 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಪತಿ ರಾಜ್ ಕುಂದ್ರಾಗೆ ಶಿಲ್ಪಾ ಶೆಟ್ಟಿ ಪ್ರೀತಿಯ ಸಂದೇಶ ನೀಡಿ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.
2009ರಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ದಂಪತಿಗೆ ವಿಹಾನ್ ಮತ್ತು ಸಮೀಶಾ ಎಂಬಿಬ್ಬರು ಮಕ್ಕಳಿದ್ದಾರೆ. 12ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಪ್ರಯುಕ್ತ ಮದುವೆ ಫೋಟೋ ಪೋಸ್ಟ್ ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
ಇನ್ನು 12 ವರ್ಷಗಳ ಹಿಂದೆ ಈ ದಿನ ಪರಸ್ಪರ ಒಂದು ಪ್ರಾಮಿಸ್ ಮಾಡಿಕೊಂಡಿದ್ದೆವು. ಒಳ್ಳೆಯ ಮತ್ತು ಕಷ್ಟದ ಕಾಲವನ್ನು ಜೊತೆಯಾಗಿ ಹಂಚಿಕೊಳ್ಳುತ್ತೇವೆ, ಪ್ರೀತಿಯಲ್ಲಿ ನಂಬಿಕೆ ಇಡುತ್ತೇವೆ, ಪ್ರತಿ ದಿನ ಜೊತೆಯಾಗಿ ಇರುತ್ತೇವೆ ಎಂದು ಪ್ರಾಮಿಸ್ ಮಾಡಿದ್ದೆವು. ನಮ್ಮ ದಾಂಪತ್ಯಕ್ಕೆ 12 ವರ್ಷವಾಗಿ ಮುಂದುವರಿಯುತ್ತಿದೆ ಎಂದು ಬರೆದುಕೊಂಡಿದ್ದಾರೆ.