ಮುಂಬೈ, ನ.20 (DaijiworldNews/HR): ನನ್ನ ತಂದೆಯ ನನಗೆ ಹಿರೋ, ಅಪ್ಪ ಎಂದರೆ ನನಗೆ ತುಂಬ ಹೆಮ್ಮೆ. ಅವರು ಬದುಕಿದ ರೀತಿ ತುಂಬ ಅದ್ಭುತವಾಗಿತ್ತು ಎಂದು ನಟ ಸುನೀಲ್ ಶೆಟ್ಟಿ ಅಪ್ಪನನ್ನು ಕೊಂಡಾಡಿದ್ದಾರೆ.
ಮೂಲತಃ ಕರಾವಳಿಯವರಾದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೆಚ್ಚು ಗುರುತಿಸಿಕೊಂಡಿದ್ದು ಬಾಲಿವುಡ್ ನಲ್ಲಿ. ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಸುನೀಲ್ ಶೆಟ್ಟಿ ಭಾಗವಹಿಸಿದ್ದು, ಆಗ ಅವರು ತಂದೆಯ ಬಗೆಗಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ನನ್ನ ತಂದೆ ಕೆಲಸ ಹುಡುಕಿಕೊಂಡು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ಬಂದಿದ್ದರು. ನಿಮ್ಮ ಹೀರೋ ಯಾರು ಅಂತ ಯಾರಾದರೂ ಕೇಳಿದರೆ ನಾನು ನನ್ನ ತಂದೆಯ ಹೆಸರು ಹೇಳುತ್ತೇನೆ. ಅಪ್ಪ ಎಂದರೆ ನನಗೆ ತುಂಬ ಹೆಮ್ಮೆ. ಅವರು ಬದುಕಿದ ರೀತಿ ತುಂಬ ಅದ್ಭುತವಾಗಿತ್ತು". ಎಂದರು.
ಇನ್ನು "ನಮ್ಮ ತಂದೆ ಕೇವಲ 9ನೇ ವಯಸ್ಸಿನಲ್ಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದು, ಮೊದಲಿಗೆ ಹೋಟೆಲ್ ಕ್ಲೀನರ್ ಆಗಿ ಕೆಲಸ ಆರಂಭಿಸಿದರು. ಜೀವನ ನಡೆಸಲು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಎಂದಿಗೂ ನಾಚಿಕೆ ಅನಿಸಲಿಲ್ಲ. ಮೊದಲು ಕ್ಲೀನರ್ ಆಗಿದ್ದ ಬಿಲ್ಡಿಂಗ್ನಲ್ಲಿಯೇ ಅವರು ನಂತರ ಮ್ಯಾನೇಜರ್ ಆಗಿ ಬೆಳೆದರು. ಬಳಿಕ ಆ ಕಟ್ಟಡಗಳನ್ನು ಖರೀದಿಸಿ ಮಾಲೀಕರಾದರು. ಅವರು ಅಂಥ ವ್ಯಕ್ತಿ ಆಗಿದ್ದರು" ಎಂದು ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ.