ಮುಂಬೈ, ನ.19 (DaijiworldNews/HR): ಮೈಸೂರಿನ ನಯನಾ ಮತ್ತು ರುದ್ರೇಶ್ ವಿವಾಹ ನವೆಂಬರ್ 24ರಂದು ನಡೆಯುತ್ತಿದ್ದು, ಈ ಮದುವೆಯ ಆಮಂತ್ರಣ ಪತ್ರವನ್ನು ಅನುಷ್ಕಾ ಶರ್ಮಾಗೆ ಕಳುಹಿಸಿ ಅದರೊಂದಿಗೆ ಸ್ವೀಟ್ಗಳನ್ನು ಕೂಡ ನೀಡಲಾಗಿದ್ದು, ಇದರ ಜತೆಗೆ ಒಂದು ಪತ್ರ ಕೂಡ ಬರೆಯಲಾಗಿದೆ. ಈ ಫೋಟೋವನ್ನು ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಟಿ ಅನುಷ್ಕಾ, "ಇದೊಂದು ಅತಿ ಮಧುರವಾದ ಮದುವೆ ಆಮಂತ್ರಣ. ಧನ್ಯವಾದಗಳು ನಯನಾ. ನೀನು ಅತ್ಯಂತ ಸುಂದರ ವಧುವಾಗುತ್ತೀಯಾ ಎಂದು ಬರೆದುಕೊಂಡಿದ್ದಾರೆ.
ಇನ್ನು ಇದನ್ನು ನೋಡಿದ ಕರ್ನಾಟಕದ ಅಭಿಮಾನಿಗಳು ಖುಷಿಯಾಗಿದ್ದು, ಈ ನಯನಾ ಯಾರು ಎನ್ನುವ ವಿಚಾರದ ಬಗ್ಗೆ ಚರ್ಚೆ ಅಭಿಮಾನಿಗಳಲ್ಲಿ ಚರ್ಚೆ ನಡೆಯುತ್ತಿದೆ.