ಮುಂಬೈ, ನ.15 (DaijiworldNews/HR): ಮಿಸ್ ಬಮ್ಬಮ್ 2021 ಕೀರಿಟ ಪಡೆದ ನಥಿ ಕಿಹರಾ ಅವರು ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನಥಿ ಕಿಹರಾ ಬ್ರೆಜಿಲಿಯನ್ ಮಾಡೆಲ್ ಆಗಿದ್ದು, ಈಕೆ ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳ ನಂತರ ಅತ್ಯಂತ ಕಿರಿಯ ಬಂಬಮ್ ವಲ್ರ್ಡ್ ಸುಂದರಿ ಎಂದು ಆಯ್ಕೆಯಾಗಿದ್ದಾರೆ. 1.3 ಮಿಲಿಯನ್ ಪೌಂಡ್ (ಅಂದಾಜು ರೂ 13 ಕೋಟಿ)ಗೆ ವಿಮೆ ಮಾಡಿದ್ದಾರೆ.
ನನ್ನ ಪೃಷ್ಠದ ಕಾರಣದಿಂದ ನಾನು ಪ್ರಸಿದ್ಧಳಾಗಿದ್ದು, ಇದು ಬ್ರೆಜಿಲ್ನಲ್ಲಿ ಅತಿ ದೊಡ್ಡದಾಗಿದೆ. ಆದ್ದರಿಂದ ಅದನ್ನು ವಿಮೆಗೆ ಹಾಕುವುದು ನ್ಯಾಯೋಚಿತವಾಗಿದೆ ಎಂದಿದ್ದಾರೆ.
ಇನ್ನು ಈಕೆಗೆ ಇಬ್ಬರು ಮಕ್ಕಳಿದ್ದು, ಒಂಬತ್ತು ವರ್ಷದ ಹುಡುಗ ಮತ್ತು ಈ ವರ್ಷದ ಆರಂಭದಲ್ಲಿ ಅವರ ಮಗಳು ಜನಿಸಿದ್ದಾಳೆ. ಪ್ರಪಂಚದಾದ್ಯಂತ ಸ್ವಾಭಿಮಾನದ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ಅಮ್ಮಂದಿರನ್ನು ಪ್ರತಿನಿಧಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಾಗಿರುವುದಕ್ಕೆ ನನಗೆ ಗೌರವವಿದೆ ಎಂದು ಹೇಳಿದ್ದಾರೆ.