ಮುಂಬೈ, ನ.14 (DaijiworldNews/HR): ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಂದು ತಮ್ಮ 3ನೇ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 14 ನವೆಂಬರ್ 2018 ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದು, ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನಕ್ಕೂ ಅವರು ಅಷ್ಟೇ ಪ್ರಮುಖ್ಯತೆಯನ್ನು ಕೊಡುತ್ತಿದ್ದು, ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ದೀಪ್ವೀರ್ ಎಂದು ಕರೆಯುತ್ತಾರೆ.
ಇನ್ನು ಇತ್ತೀಚೆಗೆ ರಣವೀರ್ ಅಪ್ಪನಾಗು ಆಸೆಯನ್ನು ವ್ಯಕ್ತಪಡಿಸಿದ್ದು, ದೀಪಿಕಾ ಚಿಕ್ಕವರಿದ್ದಾಗ ಇದ್ದಂತೆ ಕ್ಯೂಟ್ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್ ಸೆಟ್ ಆದಂತೆ ಎಂದು ಹೇಳಿಕೊಂಡಿದ್ದರು.