ರಣಬೀರ್ ಕಪೂರ್ ಜೊತೆ ಮದುವೆ ಗಾಸಿಪ್- ಅಲಿಯಾ ನೀಡಿದ್ರು ರಹಸ್ಯ ಉತ್ತರ.!
Sat, Nov 13 2021 04:16:59 PM
ಮುಂಬೈ, ನ.13 (DaijiworldNews/HR): ಹೊಸ ಯೂಟ್ಯೂಬ್ ವೀಡಿಯೋದಲ್ಲಿ ನಟಿ ಆಲಿಯಾ ತನ್ನ ಒಂದು ದಿನದ ದಿನಚರಿಯನ್ನು ಹಂಚಿಕೊಂಡಿದ್ದು, ಅದಕ್ಕೆ 'ಆಲಿಯಾ ಭಟ್ ಜೀವನದಲ್ಲಿ ಒಂದು ದಿನ' ಎಂದು ಹೆಸರಿಸಿದ್ದಾರೆ.
ವೀಡಿಯೊದಲ್ಲಿ ಆಲಿಯಾ ಭಟ್ ತನ್ನ ಕಾರಿನಲ್ಲಿ ಫಿಲ್ಮ್ ಸಿಟಿಗೆ ಹೋಗುತ್ತಿರುವುದನ್ನು ನೋಡಬಹುದು, ಅಲ್ಲಿ ತನ್ನ ಆತ್ಮೀಯ ಸ್ನೇಹಿತೆ ಆಕಾಂಶಾ ರಂಜನ್ ಕಪೂರ್ ಜೊತೆಗೆ ಜಾಹೀರಾತಿನ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದು, ಜಾಹೀರಾತು ಚಿತ್ರೀಕರಣದ ನಡುವೆ ಅಭಿಮಾನಿಗಳು ತಮಗೆ ಕೇಳಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ನೀವು ದಿನಲೂ ಕೆಲಸ ಮಾಡಲು ಹೇಗೆ ಪ್ರೇರಣೆ ಪಡೆದುಕೊಳ್ಳುತ್ತಿರಿ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಕನಸುಗಳು ಪ್ರತಿದಿನ ನನಗೆ ಹೆಚ್ಚು ಶ್ರಮವಹಿಸಲು ಪ್ರೇರೇಪಿಸುತ್ತವೆ ಮತ್ತು ನನ್ನ ಜೀವನದಲ್ಲಿ ಜನರು - ನನ್ನ ತಂಡ, ನನ್ನ ಸ್ನೇಹಿತರು, ನನ್ನ ಕುಟುಂಬ, ನನ್ನ ಪ್ರೀತಿಪಾತ್ರರು - ಅವರ ಸಹಾನುಭೂತಿ, ದಯೆ ಮತ್ತು ಪ್ರೀತಿಯಿಂದ ಉತ್ತಮ ವ್ಯಕ್ತಿಯಾಗಲು ಪ್ರತಿದಿನ ನನ್ನನ್ನು ಪ್ರೇರೇಪಿಸುತ್ತಾರೆ ಎಂದರು.
ಫೋನ್ನ ವಾಲ್ಪೇಪರ್ ಅನ್ನು ತೋರಿಸುವಂತೆ ಅಭಿಮಾನಿಯೊಬ್ಬರು ಹೇಳಿದ್ದು, ಅದಕ್ಕೆ ತನ್ನ ಫೋನ್ನ ವಾಲ್ಪೇಪರ್ನಲ್ಲಿದ್ದ ರಣಬೀರ್ ಕಪೂರ್ನ ಅವರೊಂದಿಗಿನ ಚಿತ್ರವನ್ನು ಕ್ಯಾಮೆರಾಗೆ ತೋರಿಸಿ ನಾಚಿಕೊಂಡಿದ್ದಾರೆ.
ಇನ್ನು ಎಲ್ಲರ ಮನಸ್ಸಿನಲ್ಲಿ ಇರುವ ಅಂತಿಮ ಮತ್ತು ಪ್ರಮುಖ ಪ್ರಶ್ನೆಯೆಂದರೆ ಆಲಿಯಾ ಭಟ್ ಯಾವಾಗ ಮದುವೆಯಾಗುತ್ತಾರೆ ಎಂಬುದು, ಈ ಪ್ರಶ್ನೆಗೆ ಯಾವುದೇ ಸುಳಿವು ಅಥವಾ ಉತ್ತರವನ್ನು ನೀಡದೆ ಮಾತಲ್ಲೇ ನುಣುಕಿಕೊಂಡರು.