ಮುಂಬೈ, ನ.10 (DaijiworldNews/PY): ಸಿನಿಮಾ ರಂಗಕ್ಕೆ ಕಾಲಿಟ್ಟ ದಿನಗಳಿಂದ ಹಿಡಿದು ಇಂದಿನವರೆಗೂ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಸ್ಥಾನ ಉಳಿಸಿಕೊಂಡಿರುವ ಸುಂದರ ಕಂಗಳ ಚೆಲುವೆ ದಿಯಾ ಮಿರ್ಜಾ. ಇವರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟೇ ಯಶಸ್ಸು ಸಿಕ್ಕದರೂ ಕೂಡಾ ತಮ್ಮ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ಧಾರೆ.
ದಿಯಾ ಮಿರ್ಜಾ ಅವರ ತಂದೆ ಫ್ರಾಂಕ್ ಹ್ಯಾಂಡ್ರಿಚ್ ಓರ್ವ ಜರ್ಮನ್ ಹಾಗೂ ವೃತ್ತಿಯಲ್ಲಿ ಕಲಾವಿದೆ. ಆತ ಸಾಯುವಾಗ ದಿಯಾಗೆ 9 ವರ್ಷ. ತನ್ನ ತಂದೆಯ ಕೊನೆಗಾಲದಲ್ಲಿ ಅವರ ಎಲ್ಲಾ ಆಸ್ತಿಯನ್ನು ಮಗನಿಗೆ ನೀಡಿದ್ದನ್ನು ದಿಯಾ ಮಿರ್ಜಾ ನೆನಪಿಸಿಕೊಳ್ಳುತ್ತಾರೆ.
ದಿಯಾ ಮಿರ್ಜಾ ಅವರ ತಾಯಿ ಬಂಗಾಳಿ, ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ದಿಯಾಗೆ ನಾಲ್ಕೂವರೆ ವರ್ಷ ವಯಸ್ಸಿದ್ದಾಗ ಆಕೆಯ ಹೆತ್ವರು ಬೇರೆ ಬೇರೆಯಾದರು. ಬಳಿಕ ದಿಯಾ ತಾಯಿ, ಹೈದರಾಬಾದಿನ ಮುಸ್ಲಿಂ ಅಹಮದ್ ಮಿರ್ಜ ಅವರನ್ನು ವಿವಾಹವಾದರು. ದಿಯಾಗೆ ಅವರ ಕುಟುಂಬದ ಹೆಸರನ್ನೇ ಇಡಲಾಗಿದೆ. 2003ರಲ್ಲಿ ಅಹಮದ್ ಮಿರ್ಜಾ ನಿಧನರಾದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ದಿಯಾ, "ತಂದೆಗೆ ಸೇರಿದ ಏನಾದರೂ ತನ್ನಲ್ಲಿ ಇರಬೇಕು ಎಂದು ಇಚ್ಛಿಸಿದ್ದರು. ಆದರೆ, ಅವರಿಗೆ ಸೇರಿದ್ದೆಲ್ಲವೂ ಅವರ ನಿಧನದ ಬಳಿಕ ಹುಟ್ಟಿದ ತನ್ನ ಮಲ ಸಹೋದರನ ಪಾಲಾಯಿತು" ಎಂದು ತಿಳಿಸಿದ್ದರು.
"ನನ್ನ ಮಲ ಸಹೋದರ ಕೆಲವು ವರ್ಷಗಳ ಹಿಂದೆ, ನನ್ನನ್ನು ಹಾಗೂ ತಾಯಿಯನ್ನು ನೋಡಲು ಮುಂಬೈಗೆ ಬಂದಿದ್ದರು. ಆ ವೇಳೆ ನಾನು ಆತನಿಗೆ ಮನೆ ತೋರಿಸಿದ್ದೆ. ಆತ, ನಾನು ಫೋಟೋಗಳನ್ನು ಇಟ್ಟ ಕಾರಿಡಾರ್ ಕಡೆ ಹೋದ. ಅಲ್ಲಿ ನಾನು ಪುಟ್ಟ ಮಗುವಾಗಿದ್ದಾಗ ಹೆತ್ತವರೊಂದಿಗೆ ತೆಗೆದಿದ್ದ ಫೋಟೋ ಇತ್ತು. ಆ ವೇಳೆ ನಾನು ತಂದೆಗೆ ಸೇರಿದ ಯಾವುದಾದರೂ ಒಂದು ವಸ್ತು ನನ್ನ ಬಳಿ ಇರಬೇಕಿತ್ತು ಎನ್ನುವ ಕೊರಗು ಮಾಯವಾಯಿತು. ಆತನೊಂದಿಗಿರುವ ನೆನಪುಗಳು ಹೆಚ್ಚು ಅಮೂಲ್ಯ ಎಂದು ನನಗೆ ಆ ಕ್ಷಣದಲ್ಲಿ ತಿಳಿಯಿತು" ಎಂದಿದ್ದಾರೆ.
"2018ರಲ್ಲಿ ತನ್ನ ತಂದೆಯ ಕುಟುಂಬವನ್ನು ಭೇಟಿಯಾಗಲು ದಿಯಾ ಜರ್ಮನಿಗೆ ಹೋಗಿದ್ದರಂತೆ. ತಂದೆಯೇ ನನಗೆ ಹೀರೋ ಆಗಿದ್ದರು. ಲಗೇ ರಹೋ ಮುನ್ನಾ ಭಾಯ್ ಸಿನಿಮಾದ ಒಂದು ದೃಶ್ಯದಲ್ಲಿ, ಜಿಮ್ ಶೇರ್ಗಿಲ್ನೊಂದಿಗೆ ಕ್ಯಾಬ್ನಲ್ಲಿ ನನ್ನ ತಂದೆ ನನಗೆ ಹೇಗೆ ಸುಳ್ಳು ಹೇಳಿದರು ಹಾಗೂ ಆ ಸುಳ್ಳಿನಿಂದ ನನಗೆ ಎಷ್ಟು ನಿರಾಸೆಯಾಗಿದೆ ಎನ್ನುಬ ಕುರಿತು ಮಾತನಾಡುತ್ತೇನೆ. ನನ್ನ ತಂದೆಯನ್ನು ಯಾವಾಗಲೂ ಹೀರೋ ಎಂದು ಭಾವಿಸಿದ ಕಾರಣ ಆ ಸಾಲುಗಲು ಹುಟ್ಟಿಕೊಂಡವು" ಎಂದಿದ್ದರು.
"ಹೆತ್ತವರು ಜಗಳವಾಡಿದ್ದನ್ನು ನಾನು ನೋಡಿದ್ದು ಕಡಿಮೆ. ಅತ್ಯಂತ ಕೆಟ್ಟ ಜಗಳವನ್ನು ನಾನು ನೋಡಿದ್ದೆ. ಅದನ್ನು ಬಿಟ್ಟರೆ ನಾನು ಯಾವತ್ತೂ ಜಗಳವನ್ನು ನೋಡಿರಲಿಲ್ಲ. ಹಾಗಾಗಿ ನಾನು ಗಾಬರಿಗೊಂಡ ಮೊದಲ ವಿಷಯ ಎಂದರೆ ಅವರು ಬೇರೆಯಾಗಲು ಬಯಸಿದ್ದು" ಎಂದು ಹೇಳಿದ್ದಾರೆ.
"ನನಗೆ ನನ್ನ ತಾಯಿ ಹೇಳಿದ ಒಂದು ವಿಚಾರ ಎಂದಿಗೂ ಮರೆಯುವುದಿಲ್ಲ. ಅದು ಪ್ರಾಮಾಣಿಕತೆಯ ಮೊದಲ ಪಾಠವೆಂದು ನಾನು ಭಾವಿಸುತ್ತೇನೆ. ಇಬ್ಬರು ವ್ಯಕ್ತಿಗಳು ತುಂಬಾ ಪ್ರೀತಿಸಬಹುದು. ಹಾಗೆಂದು ಅವರು ಜೊತೆಯಾಗಿ ಬದುಕಬಹುದು ಎಂದು ಅರ್ಥವಲ್ಲ. ನಾನು ನಿನ್ನ ತಂದೆಯನ್ನು ತುಂಬಾ ಪ್ರೀತಿಸುತ್ತೇನೆ. ಆತ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಆದರೆ, ನಾವು ಜೊತೆಯಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ ಜೊತೆಯಾಗಿ ಬದುಕಿದರೆ, ಒಬ್ಬರನ್ನೊಬ್ಬರು ಅಸಂತುಷ್ಟಗೊಳಿಸುತ್ತೇವೆ ಎಂದಿದ್ದರು. ಅವರು ಏನು ಹೇಳುತ್ತಿದ್ದಾರೆ ಎಂದು ನನಗೆ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಆದರೆ, ಅವರ ಮಾತನ್ನು ನಾನು ಗೌರವಿಸುತ್ತೇನೆ" ಎಂದು ತಿಳಿಸಿದ್ದಾರೆ.
ದಿಯಾ ಮಿರ್ಜಾ ಉದ್ಯಮಿ ವೈಭವ್ ಮಿರ್ಜಾ ಅವರನ್ನು ವಿವಾಹವಾಗಿದ್ದು, ಇವರಿಗೆ ಅವ್ಯಾನ್ ಆಜಾದ್ ರೇಖಿ ಎಂಬ ಮಗನಿದ್ದಾನೆ. ಇವರು ಮುಂಬೈನಲ್ಲಿರುವ ಬಾಂದ್ರಾದ ಮನೆಯಲ್ಲಿ ವಾಸವಿದ್ದಾರೆ.