ಮುಂಬೈ, ನ.09 (DaijiworldNews/HR): ನಟಿ ಜಾಹ್ನವಿ ಕಪೂರ್ ಅವರು ಇತ್ತೀಚೆಗೆ ಲೆಟೆಸ್ಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದರ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿದೆ.
ಜಾಹ್ನವಿ ಕಪೂರ್ ಅವರು ಫೋಟೋಶೂಟ್ನಲ್ಲಿ ಮತ್ಸ್ಯ ಕನ್ಯೆ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಅವರು ವಿನ್ಯಾಸ ಮಾಡಿರುವ ಧಿರಿಸುಗಳನ್ನು ತೊಟ್ಟು ಮಿಂಚಿದ್ದಾರೆ.
ಇನ್ನು ಹಲೋ ನಿಯತಕಾಲಿಕೆಗಾಗಿ ಜಾಹ್ನವಿ ಕಪೂರ್ ಕವರ್ ಗರ್ಲ್ ಆಗಿ ಪೋಸ್ ನೀಡಿದ್ದು, ಈ ಫೋಠೋಶೂಟ್ನಲ್ಲಿ ಹಸಿರು ಬಣ್ಣದ ಮರ್ಮೇಡ್ ಲುಕ್ ಸ್ಟೈಲ್ನ ಡ್ರೆಸ್ ತೊಟ್ಟು ಸಖತ್ತಾಗಿ ಕಾಣಿಸಿಕೊಂಡಿದ್ದಾರೆ ಜಾಹ್ನವಿ ಕಪೂರ್. ಅವರ ಈ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ.