ಬೆಂಗಳೂರು, ನ.08 (DaijiworldNews/HR): ನಟಿ ಮಾಧುರಿ ದೀಕ್ಷಿತ್ ಅವರ ಪುತ್ರ ರಾಯನ್ ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ಉದ್ದೇಶದಿಂದ ತಮ್ಮ ತಲೆ ಕೂದಲು ದಾನ ಮಾಡಿದ್ದಾರೆ.
ಪುತ್ರನ ಕುರಿತು ಮಾಧುರಿ ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕೀಮೋಥೆರಪಿಗೆ ಒಳಗಾಗಿ ತಲೆ ಕೂದಲು ಉದುರುವುದು ಸಾಮಾನ್ಯ ಅವರಿಗೆ ವಿಗ್ ತಯಾರಿಸಲು ತಲೆ ಕೂದಲಿನ ಅಗತ್ಯವಿರುತ್ತದೆ. ಹೀಗಾಗಿ ಅದನ್ನು ಗಮನಿಸಿದ ರಾಯನ್, ಸುಮಾರು ಎರಡು ವರ್ಷಗಳ ಕಾಲ ತಲೆಕೂದಲು ಕತ್ತರಿಸದೆ ಹಾಗೆಯೇ ಉಳಿಸಿಕೊಂಡಿದ್ದು,ಈಗ ತಲೆಕೂದಲು ಕತ್ತರಿಸಿ, ಅದನ್ನು ಕ್ಯಾನ್ಸರ್ ಸೊಸೈಟಿಗೆ ನೀಡಿದ್ದಾರೆ" ಎಂದರು.
ಇನ್ನು ಮಗನ ನಿರ್ಧಾರದ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಕೂಡ ರಾಯನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 7ರಂದು ನ್ಯಾಷನಲ್ ಕ್ಯಾನ್ಸರ್ ಅವಾರ್ನೆಸ್ ಡೇ ಆಚರಿಸಲಾಗುತ್ತದೆ.