ಬೆಂಗಳೂರು, ನ.05 (DaijiworldNews/PY): ಸ್ಯಾಂಡಲ್ವುಡ್ ನಟ ಪುನೀತ್ ರಾಜ್ ಕುಮಾರ್ ಇಂದು ನಮ್ಮೊಂದಿಗಿಲ್ಲ. ಅಪ್ಪು ಅಗಲಿ ಇಂದಿಗೆ ಒಂದು ವಾರ ಕಳೆದಿದೆ. ಇಹಲೋಕ ತ್ಯಜಿಸಿರುವ ಅಪ್ಪು ತಂದೆ, ತಾಯಿಯೊಂದಿಗೆ ಸ್ವರ್ಗದಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಡಾ ರಾಜ್ ಕುಮಾರ್ ಅವರಂತೆ ಚಂದನವನದಲ್ಲಿ ಪುನೀತ್ ರಾಜ್ಕುಮಾರ್ ಅವರೂ ಕೂಡಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಪುನೀತ್ ಅರ ಅಗಲುವಿಕೆಯಿಂದ ದುಃಖದಲ್ಲಿರುವ ಪುನೀತ್ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರೀತಿಯಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಈ ನಡುವೆ ಸ್ವರ್ಗದಲ್ಲಿ ಪುನೀತ್ ಅವರು ಅಪ್ಪಾಜಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಲಾವಿದ ಕರಣ್ ಆಚಾರ್ಯ ಅವರು, ಸ್ವರ್ಗದಲ್ಲಿ ಪುನೀತ್ ಅವರು ಅಪ್ಪಾಜಿ ಅವರ ಕಣ್ಣು ಮುಚ್ಚಿ ನಾನು ಯಾರು ಎಂದು ಕೇಳುತ್ತಿರುವಂತೆ ಕಲ್ಪಿಸಿಕೊಂಡು ಚಿತ್ರಿಸಿದ್ದಾರೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆಗುತ್ತಿದ್ದು, ಕಲಾವಿದನ ಕೈಚಳಕಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.