ಮುಂಬೈ, ನ.01(DaijiworldNews/HR): ನಟಿ ಐಶ್ವರ್ಯಾ ರೈ 48ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದು ತನ್ನ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳ ಜತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಐಶ್ವರ್ಯಾ ರೈ ಅವರಿಗೆ ಮಗಳು ಆರಾಧ್ಯಾ ಎಂದರೆ ಐಶ್ವರ್ಯಾಗೆ ಬಹಳ ಪ್ರೀತಿ. ಅವಳನ್ನು ಅತ್ಯಂತ ಪ್ರೀತಿಯಿಂದ ಬಚ್ಚನ್ ಕುಟುಂಬ ಬೆಳೆಸುತ್ತಿದ್ದಾರೆ.
ಇನ್ನು ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಇಬ್ಬರೂ ಸಖತ್ ಕ್ಯೂಟ್ ಆಗಿ ಪೋಟೊ ತೆಗೆಸಿಕೊಂಡಿದ್ದು, ಇಬ್ಬರು ಸಖತ್ ಆಗಿ ಮಿಂಚಿದ್ದಾರೆ.
ಐಶ್ವರ್ಯಾ ರೈಗೆ ಎಲ್ಲಾ ಕಡೆಗಳಿಂದಲೂ ಹುಟ್ಟುಹಬ್ಬದ ವಿಶ್ ಗಳ ಸುರಿ ಮಳೆಯೇ ಬರುತ್ತಿದೆ ಎನ್ನಲಾಗಿದೆ.