ಜೈಪುರ, ಅ.26 (DaijiworldNews/HR): ಬಾಲಿವುಡ್ ಜನಪ್ರಿಯ ಗಾಯಕಿ ನೇಹಾ ಕಕ್ಕರ್ ಮತ್ತು ಪಂಜಾಬಿ ಗಾಯಕ ರೋಹನ್ ಪ್ರೀತ್ ಸಿಂಗ್ ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ಮದುವೆ ವಾರ್ಷಿಕೋತ್ಸವವನ್ನು ಅಕ್ಟೋರ್ 24ರಂದು ಆಚರಿಸಿಕೊಂಡಿರುವ ನೇಹಾ ಅವರು ಪತಿ ರೋಹನ್ ಜೊತೆಗಿರುವ ಕೆಲವೊಂದು ರೋಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ನಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವ ಹೀಗಿತ್ತು. ನಮನ್ನು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಆಶೀರ್ವಾದ, ಪೋಸ್ಟ್, ಸ್ಟೋರಿಗಳು, ನಿಮ್ಮ ಸಂದೇಶ, ನಿಮ್ಮ ಕರೆ ನಿಮ್ಮೆಲ್ಲರ ಪ್ರೀತಿ ನಮ್ಮನ್ನು ಸಂತಸಗೊಳಿಸಿತು ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.