ಮುಂಬೈ, ಅ.12 (DaijiworldNews/HR): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಆರ್ಯನ್ ಖಾನ್ ಆರೋಗ್ಯದ ಬಗ್ಗೆ ಎನ್ಸಿಬಿ ಅಧಿಕಾರಿಗಳ ಬಳಿ ವಿಚಾರಿಸುತ್ತಾ ಶಾರೂಖ್ ಖಾನ್ ದಂಪತಿ ರಾತ್ರಿಯಿಡೀ ನಿದ್ದೆಗೆಟ್ಟು ಕುಳಿತಿದ್ದರು ಎನ್ನಲಾಗಿದೆ.
ಮಗ ಜೈಲಿನಲ್ಲಿ ಹೇಗೆ ದಿನಗಳನ್ನು ಕಳೆಯುತ್ತಿದ್ದಾನೋ ಎಂಬ ಚಿಂತೆ ಆರ್ಯನ್ ಪೋಷಕರು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಊಟ- ತಿಂಡಿಯೂ ಇಲ್ಲದಾಗಿದೆ ಎಂದು ಎಸ್ಆರ್ ಕೆ ಆಪ್ತರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇನ್ನು ಅಕ್ಟೋಬರ್ 3 ರಂದು ಡ್ರಗ್ಸ್ ಪ್ರಕರಣ ಸಂಬಂಧ ಆರ್ಯನ್ ಖಾನ್ ನನ್ನು ನ್ಯಾಯಾಂಗ ಬಂಧನವಾಗಿದ್ದು, ಆರ್ಯನ್ ಖಾನ್ ಬಂಧನದ ಬಳಿಕ ಶಾರುಖ್ ಖಾನ್ ಮತ್ತು ಗೌರಿ ಖಾನ್ ತುಂಬಾ ಬೇಸರಗೊಂಡಿದ್ದಾರೆ.
ನಿನ್ನೆ ಆರ್ಯನ್ ಖಾನ್ ಮತ್ತು ಇತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ. ಬುಧವಾರ ಮಧ್ಯಾಹ್ನದ ಬಳಿಕ ಸುದೀರ್ಘ ವಿಚಾರಣೆ ನಡೆಯಲಿದೆ.