ಹೈದರಾಬಾದ್, ಅ.12 (DaijiworldNews/HR): ತೆಲುಗು ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (ಮಾ) ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಟ ಮಂಚು ವಿಷ್ಣು ವಿರುದ್ಧ ನಟ ಪ್ರಕಾಶ್ ರೈ ಸೋತಿದ್ದು, ಅಸೋಸಿಯೇಷನ್ನಿಂದ ರೈ ಹೊರನಡೆದಿದ್ದಾರೆ.
ಈ ಕುರಿತು ಅಸಮಧಾನ ಹೊರ ಹಾಕಿರುವ ರೈ, "ನನ್ನ ಸೋಲಿಗೆ ಸದಸ್ಯರು ಪ್ರಾದೇಶಿಕ ಭಾವನೆಯಿಂದ ಮತ ಹಾಕಿದ್ದೇ ಸೋಲಿಗೆ ಕಾರಣ. ನಾನು ತೆಲುಗಿನ ವ್ಯಕ್ತಿ ಅಲ್ಲ, ಹೊರಗಿನವನು ಎಂದು ವರ್ಗೀಕರಿಸಿದ್ದಾರೆ" ಎಂದರು.
ಇನ್ನು 'ಮಾ'ದಲ್ಲಿ 900ಕ್ಕೂ ಹೆಚ್ಚು ಸದಸ್ಯರಿದ್ದು, ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆದಿತ್ತು. ಪ್ರಚಾರದಲ್ಲಿ ಅಹಿತಕರವಾದ ಆರೋಪ, ಪ್ರತ್ಯಾರೋಪಗಳೂ ಕೇಳಿ ಬಂದಿದ್ದವು.
ಒಟ್ಟು 657 ಸದಸ್ಯರು ಮತ ಚಲಾಯಿಸಿದ್ದರು. ರೈ ಅವರು 109 ಮತಗಳ ಅಂತರದಿಂದ ಸೋತಿದ್ದಾರೆ.
ನಾನು ಹೈದರಾಬಾದ್ನಲ್ಲಿ ಅತಿಥಿಯ ಹಾಗೆ ಇರಬೇಕು ಎಂದು ಮೋಹನಬಾಬು, ಕೋಟ ಶ್ರೀನಿವಾಸ ರಾವ್ ಅವರಂತಹ ನಟರು ಹೇಳಿದ್ದಾರೆ. ಹಾಗಾಗಿ ಇಲ್ಲಿ ನಾನು ಆಹ್ವಾನಿತನ ರೀತಿಯಲ್ಲಿಯೇ ಇರುತ್ತೇನೆ. 'ಮಾ' ಸದಸ್ಯತ್ವ ಬೇಡ. ನಾನು ಲೋಕಸಭಾ ಚುನಾವಣೆಯಲ್ಲಿಯೂ (ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಅವರು ಸ್ಪರ್ಧಿಸಿದ್ದರು) ಸೋತಿದ್ದೇನೆ. ಆದರೆ ರಾಜಕೀಯ ಬಿಟ್ಟಿಲ್ಲ. ಇನ್ನು ಮುಂದೆ 'ಮಾ'ದಲ್ಲಿ ಇರುವುದಿಲ್ಲ ಎಂದು ರೈ ಹೇಳಿದ್ದಾರೆ.