ಮುಂಬೈ, ಅ.11 (DaijiworldNews/HR): ನಟ ಯಶ್ ಹೇರ್ ಸ್ಟೈಲ್ ತುಂಬ ಫೇಮಸ್ ಆಗಿದ್ದು, ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಯಶ್ ಅದೇ ಹೇರ್ ಸ್ಟೈಲ್ ಇಂದಿಗೂ ನಿಭಾಯಿಸುತ್ತಿದ್ದು, ಇತ್ತೀಚೆಗೆ ಅವರು ಮುಂಬೈಗೂ ತೆರಳಿದ್ದರು. ಜನಪ್ರಿಯ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಸಲೂನ್ಗೆ ತೆರಳಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ.
ಆಲಿಮ್ ಹಕೀಮ್ ಅವರು ಯಶ್ ಗೆ ಕೇಶ ವಿನ್ಯಾಸ ಮಾಡಿರುವ ಒಂದು ವಿಡಿಯೋವನ್ನು ಆಲಿಮ್ ಹಕೀಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದು ಸಖತ್ ವೈರಲ್ ಆಗುತ್ತಿದ್ದು, ಅನೇಕ ಅಭಿಮಾನಿಗಳು ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನು ಕೆಜಿಎಫ್ ಚಾಪ್ಟರ್ 2’ ಚಿತ್ರಕ್ಕೆ ಇನ್ನೂ ಪ್ಯಾಚ್ವರ್ಕ್ ಶೂಟಿಂಗ್ ನಡೆಯುತ್ತಿದ್ದು, ಹೇರ್ ಸ್ಟೈಲ್ಗೆ ಹೆಚ್ಚು ಮಹತ್ವ ನೀಡಿದ್ದಾರೆ. ಯಶ್ ಅವರು ಕೆಲಸದ ಸಲುವಾಗಿ ಅವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ್ದು, ಈ ವೇಳೆ ಅವರನ್ನು ಅಭಿಮಾನಿಗಳು ಮುತ್ತಿಗೆ ಹಾಕಿಕೊಂಡರು. ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.