ಮುಂಬೈ, ಅ.09 (DaijiworldNews/HR): ಯೋಗದಿಂದಾಗಿ ನಾನು ಬದುಕುಳಿದೆ ಎಂದು ತಮ್ಮ ‘ಬ್ರೇಕಿಂಗ್ ಪಾಯಿಂಟ್’ ಬಗ್ಗೆ ಬಾಲಿವುಟ್ ನಟಿ, ಡ್ಯಾನ್ಸರ್ ಮಲೈಕಾ ಅರೋರಾ ತನ್ನ ದುಃಖವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಲೈಕಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ನಾಳೆ, ಅ.10 ವಿಶ್ವ ಮಾನಸಿಕ ಆರೋಗ್ಯ ದಿನ. ನನ್ನ ಮನಸ್ಸು ನನಗೆ ಗೊತ್ತಿಲ್ಲದೇ ಏನೇನೋ ನನ್ನೊಂದಿಗೆ ಆಟವಾಡಲು ಆರಂಭಿಸಿದ್ದು, ಯೋಗದಿಂದಾಗಿ ನಾನು ಬದುಕುಳಿದೆ ಎಂದು ತಮ್ಮ ‘ಬ್ರೇಕಿಂಗ್ ಪಾಯಿಂಟ್’ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ನು "ನಾನು ಮೊದಲು ಕೆಲವು ಯೋಗ ತರಗತಿಯಲ್ಲಿದ್ದಾಗ, ಒಂದು ದಿನ ನನ್ನ ಬ್ರೇಕಿಂಗ್ ಪಾಯಿಂಟ್ ಬಂತು. ಏನೇ ಮಾಡಿದರು ನನ್ನ ಕಣ್ಣೀರು ನಿಲ್ಲಲಿಲ್ಲ. ನಾನು ನನ್ನೊಳಗೆ ಹಿಂಸೆಪಟ್ಟುಕೊಂಡು ಬದುಕುಳಿದೆ. ನಾನು ಎಂದಿಗೂ ನನ್ನನ್ನು ಬುಲೆಟ್ ಪ್ರೂಫ್ ಎಂದು ಕರೆಯುವುದಿಲ್ಲ. ಏಕೆಂದರೆ ನಮ್ಮಲ್ಲಿ ಯಾರೂ ಇಲ್ಲ. ನಾನು ಸ್ಥಿರವಾಗಿ, ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಾಗಿರಲು ಬಯಸುವ ಹಾದಿಯಲ್ಲಿ ನನ್ನನ್ನು ಕರೆದುಕೊಂಡು ಹೋಗುತ್ತೇನೆ. ಇದು ನನ್ನ ಸರ್ವಸ್ವ. ನಿಮ್ಮ ಕಥೆಯನ್ನು ನಮಗೂ ತಿಳಿಸಿ, ನಾವು ಕೇಳುತ್ತೇವೆ" ಎಂದು ಹೇಳಿದ್ದಾರೆ.