ಮುಂಬೈ, ಅ.05 (DaijiworldNews/HR): ಇತ್ತೀಚೆಗೆ ಸಪ್ತಪದಿ ತುಳಿದ ನಟಿ ಯಾಮಿ ಗೌತಮ್ ಇದೀಗ ಸತ್ಯವೊಂದನ್ನು ಬಾಯಿ ಬಿಟ್ಟಿದ್ದು, ಅವರಿಗೆ ಇರುವ ಒಂದು ಕಾಯಿಲೆ ಕುರಿತಾಗಿ ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಕುರಿತು ತಮ್ಮ ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇತ್ತೀಚೆಗೆ ಒಂದು ಫೋಟೋಶೂಟ್ ಮಾಡಲಾಯಿತು. ಸಾಮಾನ್ಯವಾಗಿ ನಮ್ಮ ಚರ್ಮದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ಆ ಫೋಟೋಗಳನ್ನು ಪೋಸ್ಟ್ ಪ್ರೊಡಕ್ಷನ್ಗೆ ಕಳಿಸುತ್ತೇವೆ. ಆದರೆ ಈ ಬಾರಿ ನಾನೇಕೆ ಈ ಸಮಸ್ಯೆಯನ್ನು ಒಪ್ಪಿಕೊಳ್ಳಬಾರದು ಎನಿಸಿತು ಎಂದಿದ್ದಾರೆ.
ಇನ್ನು "ಈ ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಮಾಡಿದ್ದೇನೆ. ನಾನು ಹದಿಹರೆಯದಲ್ಲಿ ಇರುವಾಗಲೇ ಈ ಸಮಸ್ಯೆ ಇರುವುದು ಗೊತ್ತಾಗಿದ್ದು,. ಇನ್ನೂ ಇದು ವಾಸಿ ಆಗಿಲ್ಲ. ಅನೇಕ ವರ್ಷಗಳಿಂದ ಇದನ್ನು ನಿಭಾಯಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ಕೆರಟೋಸಿಸ್ ಪಿಲಾರಸ್ ಎಂಬ ಚರ್ಮದ ಸಮಸ್ಯೆ ಯಾಮಿ ಗೌತಮ್ ಅವರನ್ನು ಕಾಡುತ್ತಿದ್ದು,ಇದೇನೂ ಗಂಭೀರ ಸಮಸ್ಯೆ ಅಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಚರ್ಮದ ಮೇಲ್ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಆಗುತ್ತವೆ. ಈ ಗುಳ್ಳೆಗಳಿಂದ ಉರಿ, ತುರಿಕೆ, ನೋವು ಏನೂ ಇರುವುದಿಲ್ಲ.