ಮುಂಬೈ, ಅ.03 (DaijiworldNews/HR): ಸ್ಟಾರ್ ದಂಪತಿಗಳಾಗಿದ್ದ ನಟ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ನಟಿ ಕಂಗನಾ ರಣಾವತ್ ಎಳೆ ತಂದು ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಕಂಗನಾ ರಣಾವತ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಎರಡು ಸ್ಟೋರಿಗಳನ್ನು ಬರೆದು ಪೋಸ್ಟ್ ಮಾಡಿದ್ದು, ವಿಚ್ಛೇದನದಲ್ಲಿ ಯಾವಾಗಲೂ ತಪ್ಪು ಪುರುಷರದ್ದೇ ಆಗಿರುತ್ತದೆ. ಪುರುಷ ಬೇಟೆಗಾರ ಆಗಿದ್ದರೆ ಮಹಿಳೆ ಪೋಷಕಿಯಾಗಿರುತ್ತಾಳೆ. ಮಹಿಳೆಯರನ್ನು ಬಟ್ಟೆಯಂತೆ ಬದಲಿಸಿ ನಂತರ ನಾವು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವವರ ಮೇಲೆ ದಯೆ ತೋರಿಸುವುದನ್ನು ನಿಲ್ಲಿಸಿ" ಎಂದು ಹೇಳಿದ್ದಾರೆ.
ಇನ್ನು ದಕ್ಷಿಣ ಭಾರತದ ಈ ನಟ ಹಲವು ವರ್ಷಗಳಿಂದ ರಿಲೇಶನ್ ಶಿಪ್ನಲ್ಲಿದ್ದು, ಮದುವೆಯಾಗಿ 4 ವರ್ಷಗಳ ನಂತರ ಇದೀಗ ಇದ್ದಕ್ಕಿದಂತೆ ಹೆಂಡತಿಗೆ ಡಿವೋರ್ಸ್ ನೀಡಿದ್ದಾರೆ. ಇವರು ಇತ್ತೀಚೆಗೆ ಬಾಲಿವುಡ್ ಡಿವೋರ್ಸ್ ಎಕ್ಸ್ ಪರ್ಟ್ ಬಾಲಿವುಡ್ ಸೂಪರ್ ಸ್ಟಾರ್ ಭೇಟಿಯಾಗಿದ್ದರು. ಅನೇಕ ಮಹಿಳೆಯರು ಮತ್ತು ಮಕ್ಕಳ ಜೀವನ ಹಾಳು ಮಾಡಿ. ಈಗ ಮಾರ್ಗದರ್ಶಕರಾಗಿದ್ದಾರೆ. ಇದಕ್ಕೂ ಮುಂಚೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಬಳಿಕ ಎಲ್ಲವೂ ಬದಲಾಯಿತು ಎಂದಿದ್ದಾರೆ.