ನವದೆಹಲಿ, ಅ.01 (DaijiworldNews/HR): 'ಮಿಸ್ ಯೂನಿವರ್ಸ್ ಇಂಡಿಯಾ 2021'ರ ಕಿರೀಟವನ್ನು ಚಂಡೀಗಡ ಮೂಲದ ಹರ್ನಾಸ್ ಸಂಧು ಮುಡಿಗೇರಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 30ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಪ್ರಶಸ್ತಿ ಪ್ರದಾನ ಮಾಡಿದ್ದು, ಹರ್ನಾಸ್ ಅವರು ಈ ಮೂಲಕ ಇಸ್ರೇಲ್ನಲ್ಲಿ ನಡೆಯಲಿರುವ 'ವಿಶ್ವ ಸುಂದರಿ' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.
ಪುಣೆಯ ರಿತಿಕಾ ಖಟ್ನಾನಿ 'ಮಿಸ್ ದೀವಾ ಸೂಪರ್ನ್ಯಾಷನಲ್ 2021' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಅವರು 13ನೇ ಮಿಸ್ ಸೂಪರ್ನ್ಯಾಷನಲ್ ಪೇಜೆಂಟ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇನ್ನು ಜೈಪುರದ ಸೋನಲ್ ಕುಕ್ರೇಜಾ 'ಮಿಸ್ ದೀವಾ'ದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದು, ಬಾಲಿವುಡ್ನ ಖ್ಯಾತ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧರು.