ಮುಂಬೈ, ಸೆ.24 (DaijiworldNews/HR): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪತ್ನಿ ಅಮೃತಾ ಸಿಂಗ್ ಅವರ ಮಕ್ಕಳಾದ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಹಾಗೂ ಕರೀನಾ ಕಪೂರ್ ಸೈಫ್, ತೈಮೂರ್ ಹಾಗೂ ಜೇಹ್ ಎಂಬ ಈರ್ವರು ಮಕ್ಕಳನ್ನು ಹೊಂದಿದ್ದು, ಇತ್ತೀಚೆಗೆ ಅವರು ತಮ್ಮ ಮಕ್ಕಳಿಗೆ ನಟರಾಗಲು ತನ್ನ ಸಲಹೆಯನ್ನು ಕೊಟ್ಟಿದ್ದಾರೆ.
ವಾಹಿನಿಯೊಂದರ ಸಂದರ್ಶನದಲ್ಲಿಮಾತನಾಡಿದ ಸೈಫ್, "ಒಂದು ವೇಳೆ ನನ್ನ ಮಕ್ಕಳಾದ ಜೇಹಾ, ಇಬ್ರಾಹಿಂ ಹಾಗೂ ತೈಮೂರ್ ಸಿನಿಮಾ ರಂಗಕ್ಕೆ ಕಾಲಿಡುವುದಾದರೆ ಸುತ್ತಮುತ್ತಲಿನ ಜನರಿಂದ ಮೊದಲು ಕಲಿಯಿರಿ ಎನ್ನುತ್ತೇನೆ" ಎಂದಿದ್ದಾರೆ.
ಇನ್ನು "ನಿಮ್ಮ ಸುತ್ತ ಮುತ್ತ ನಟರು, ದೊಡ್ಡ ತಾರೆಯರು ಎಲ್ಲರೂ ಇದ್ದಾರೆ. ಎಲ್ಲರನ್ನೂ ನೋಡಿ ಕಲಿಯಿರಿ. ಒಳ್ಳೆಯ ಕೆಲಸಗಳನ್ನು ಮಾಡಿ. ತಪ್ಪುಗಳನ್ನೂ ಮಾಡಿ. ಆದರೆ ಮಾಡಿದ ತಪ್ಪಿನಿಂದ ಪಾಠವನ್ನು ಕಲಿಯಿರಿ. ಇತರರ ತಪ್ಪುಗಳಿಂದಲೂ ನೀವು ಪಾಠ ಕಲಿಯಿರಿ" ಎಂದು ಸಲಹೆ ನೀಡಿದ್ದಾರೆ.
"ಈ ಎಲ್ಲಾ ಗುಣಗಳನ್ನು ಒಬ್ಬ ಕಲಾವಿದ ನೆನಪಿಟ್ಟುಕೊಳ್ಳಬೇಕು. ನೀವು ಮಾಡುವ ಸಿನಿಮಾಗಳು ಉತ್ತಮ ಮನೋರಂಜನೆ ನೀಡಬೇಕು. ಅದನ್ನು ಗಮನದಲ್ಲಿಟ್ಟುಕೊಳ್ಳಿ" ಎಂದು ಹೇಳಿದ್ದಾರೆ.