ಮುಂಬೈ, ಸೆ. 19 (DaijiworldNews/HR): ಬಿಗ್ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಶಿಲ್ಪ ಶೆಟ್ಟಿಯವರ ತಂಗಿ ಶಮಿತಾ ಶೆಟ್ಟಿ ಅವರನ್ನು ಭೇಟಿಯಾಗಲು ಇತ್ತೀಚೆಗೆ ಅವರ ತಾಯಿ ಸುನಂದಾ ಶೆಟ್ಟಿ ತೆರಳಿದ್ದರು. ಈ ಸಂದರ್ಭದ ಫೋಟೋವೊಂದನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು,ಈ ವೇಳೆ ಅಭಿಮಾನಿಯೊಬ್ಬ ‘ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಈರ್ವರೂ ನಿಮ್ಮ ಸಹೋದರಿಯರೇ? ಎಂದು ಪ್ರಶ್ನಿಸಿದ್ದಾನೆ.
ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿರುವ ಸುನಂದಾ ಶೆಟ್ಟಿ ಪ್ರತಿಕ್ರಿಯಿಸಿ, ಧನ್ಯವಾದಗಳು. ಅವರೀರ್ವರೂ ನನ್ನ ಮುದ್ದು ಮಕ್ಕಳು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಉತ್ತರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇತ್ತೀಚೆಗಷ್ಟೇ ಬಿಗ್ಬಾಸ್ ಮನೆಯಲ್ಲಿನ ಫೋಟೊವನ್ನು ಅವರು ಹಂಚಿಕೊಂಡಾಗ ನಟಿ ಶಿಲ್ಪಾ ಶೆಟ್ಟಿ ಕಾಮೆಂಟ್ ಮಾಡಿ ತಾಯಿಯ ಸೌಂದರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಇದೀಗ ಅಭಿಮಾನಿಯೊಬ್ಬ ನೀವು ಶಿಲ್ಪಾ, ಶಮಿತಾರ ಸಹೋದರಿಯರಂತೆ ಕಾಣುತ್ತೀರಿ ಎಂದು ಹೊಗಳಿ ಮೆಚ್ಚುಗೆ ಸೂಚಿಸಿದ್ದಾನೆ.
ಆ ಸಂದರ್ಭದಲ್ಲಿ ಶಮಿತಾ ಅಕ್ಕ ಶಿಲ್ಪಾ ಅವರ ಪತಿ ರಾಜ್ ಕುಂದ್ರಾ ಅವರ ಬಗ್ಗೆ ವಿಚಾರಿಸಿದ್ದರು. ಆಗ ಸುನಂದಾ, ಹೊರಗೆಲ್ಲವೂ ಚೆನ್ನಾಗಿದೆ ಎಂದಿದ್ದರು.