ಬೆಂಗಳೂರು, ಸ.17 (DaijiworldNews/HR): ಟಾಲಿವುಡ್ನಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಗೆ ಬಹಳ ಬೇಡಿಕೆ ಇದ್ದು, ಇವರ ಮಧ್ಯೆ ಯಾರನ್ನು ಸಿನಿಮಾಗೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ನಿರ್ಮಾಪಕರಿಗೆ ಸಾಕಷ್ಟು ಬಾರಿ ಮೂಡಿದ್ದಿದೆ. ಈಗ ರಶ್ಮಿಕಾ ಅವರನ್ನು ಪೂಜಾ ಹೆಗ್ಡೆ ಹಿಂದಿಕ್ಕಿದ್ದಾರೆ. ಹೀಗಾಗಿ ರಶ್ಮಿಕಾಗೆ ಬೇಡಿಕೆ ಕಡಿಮೆ ಆಗುತ್ತಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಪವನ್ ಕಲ್ಯಾಣ್ ಮುಂಬರುವ ಸಿನಿಮಾ 'ಭವದಿಯುಡು ಭಗತ್ ಸಿಂಗ್'ಗೆ ಹರೀಶ್ ಶಂಕರ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಪೂಜಾ ಹೆಗ್ಡೆ ಅಥವಾ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಆಲೋಚನೆ ಆಗಿತ್ತು. ಅಂತಿಮವಾಗಿ ಪೂಜಾ ಹೆಗ್ಡೆ ಪವನ್ ಕಲ್ಯಾಣ್ಗೆ ನಾಯಕಿ ಆಗಿದ್ದಾರೆ.
'ಡಿಜೆ' ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಹರೀಶ್ ಒಟ್ಟಾಗಿ ಕೆಲಸ ಮಾಡಿದ್ದು, ಈ ಕಾರಣಕ್ಕೆ ಪೂಜಾ ಹೆಗ್ಡೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ ಹರೀಶ್ ಶಂಕರ್.
ಈ ಮಧ್ಯೆ ರಶ್ಮಿಕಾ ಬೇಡಿಕೆ ಕಳೆದುಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡೋಕೆ ಆರಂಭವಾಗಿದೆ.