ನ್ಯೂಯಾರ್ಕ್, ಸ. 14 (DaijiworldNews/HR): ನ್ಯೂಯಾರ್ಕ್ನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಅದ್ದೂರಿಯಾಗಿ ಮೆಟ್ ಗಾಲಾ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಅಮೆರಿಕದ ಅಥ್ಲೀಟ್ ಸಿಮೋನ್ ಬೈಲ್ಸ್ ಅವರು ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ವೇಳೆ ಅವರು ಧರಿಸಿದ ಬಟ್ಟೆ ಎಲ್ಲರ ಗಮನ ಸೆಳೆದಿದೆ.
ಸಿಮೋನ್ ಬೈಲ್ಸ್ ಅವರು 'ಮೆಟ್ ಗಾಲಾ 2021' ಕಾರ್ಯಕ್ರಮದಲ್ಲಿ ಧರಿಸಿದ್ದ ಗೌನ್ ತೂಕ ಬರೋಬ್ಬರಿ 88 ಪೌಂಡ್. ಅಂದರೆ ಸುಮಾರು 40 ಕೆಜಿ! ಇದೇ ಮೊದಲ ಬಾರಿಗೆ ಈ ಬೃಹತ್ ಫ್ಯಾಷನ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವ ಸೂಪರ್ ಸ್ಟಾರ್ ಅಥ್ಲೀಟ್ ಸಿಮೋನ್ ಬೈಲ್ಸ್ಗಾಗಿ ಈ ವಿಶೇಷ ಗೌನ್ ತಯಾರಿಸಲಾಗಿದೆ.
ಇನ್ನು ಸದ್ಯ ಈ ಫೋಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದ್ದು, ಇಲ್ಲಿ ನನ್ನ ಡ್ರೆಸ್ಗಿಂತಲೂ ಚೆನ್ನಾಗಿ ಬೇರೆ ಯಾರ ಡ್ರೆಸ್ ಕೂಡ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹುಡುಗಿಯರಿಗೆ ನಾನೊಂದು ಮಾತು ಹೇಳುತ್ತೇನೆ. ನೀವು ಸ್ಪೋರ್ಟ್ಸ್ನಲ್ಲಿ ಟಫ್ ಆಗಿರಬಹುದು. ಆದರೆ ಆ ಒಂದು ಕಂಫರ್ಟ್ ಝೋನ್ನಿಂದ ಹೊರಬಂದು ಈ ರೀತಿಯ ಸುಂದರವಾದ ಗೌನ್ ಕೂಡ ಧರಿಸಬಹುದು ಎಂದು ಹೇಳಿದ್ದಾರೆ.