ಮುಂಬೈ, ಸೆ. 07 (DaijiworldNews/PY): ಸ್ಯಾಂಡಲ್ವುಡ್ನಲ್ಲಿ ಮಿಂಚಿರುವ ಕಾಲಿವುಡ್ನ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರು ಇದೀಗ ವಿವಾದವೊಂದಕ್ಕೆ ಸಿಲುಕಿದ್ದಾರೆ.
ಸಿನಿಮಾ ಶೂಟಿಂಗ್ನ ಸಂದರ್ಭ ತ್ರಿಷಾ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದು, ಅವರನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ.
ಪೊನ್ನಿಯಿನ್ ಸೆಲ್ವನ್ ಎನ್ನುವ ಸಿನಿಮಾ ಶೂಟಿಂಗ್ ಇಂದೋರ್ನಲ್ಲಿರುವ ಪ್ರಸಿದ್ದ ಐತಿಹಾಸಿಕ ದೇವಾಲಯದಲ್ಲಿ ನಡೆಯುತ್ತಿದೆ. ಈ ವೇಳೆ ಶೂಟಿಂಗ್ನ ಗ್ಯಾಪ್ನಲ್ಲಿ ನಟಿ ತ್ರಿಷಾ ಕೃಷ್ಣನ್ ಅವರು ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಓಡಾಡುತ್ತಿದ್ದರು ಎನ್ನಲಾಗಿದೆ.
ದೇವಾಲಯದಲ್ಲಿರುವ ಶಿವಲಿಂಗ ಹಾಗೂ ನಂದಿ ನಡುವೆ ನಟಿ ತ್ರಿಷಾ ಕೃಷ್ಣನ್ ಅವರು ಚಪ್ಪಲಿ ಧರಿಸಿ ಓಡಾಡುತ್ತಿರುವುದನ್ನು ಅಲ್ಲಿನ ಜನ ಕ್ಲಿಕ್ ಮಾಡಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ತ್ರಿಷಾ ಕೃಷ್ಣನ್ ಅವರ ಈ ವರ್ತನೆಯಿಂದ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತ್ರಿಷಾ ಕೃಷ್ಣನ್ ಅವರನ್ನು ಬಂಧಿಸಿ ಎಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ.