ಮುಂಬೈ, ಸ.05 (DaijiworldNews/HR): ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅನೇಕ ಬಾರಿ ಟ್ರೋಲಿಗರ ಕೈಗೆ ಸಿಕ್ಕಿಬಿದ್ದಿದ್ದು, ಮದುವೆ ವಿಚಾರ, ಅವರ ಸಂಭಾವನೆ ವಿಚಾರ, ಕೊನೆಗೆ ಮಕ್ಕಳ ವಿಚಾರದಲ್ಲೂ ಈ ದಂಪತಿ ಟ್ರೋಲ್ಗೆ ಒಳಗಾಗಿದ್ದಾರೆ.
ನಿರಂತರವಾಗಿ ಟೀಕೆಗೆ ಒಳಗಾಗುತ್ತಿದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದ್ದು, ಈ ಕಾರಣಕ್ಕೆ ಸೈಫ್ಗೆ ಟ್ರೋಲ್ಗಳನ್ನು ನೋಡದಂತೆ ಹಾಗೂ ತಮ್ಮ ಬಗ್ಗೆ ತಾವೇ ಗೂಗಲ್ನಲ್ಲಿ ಸರ್ಚ್ ಮಾಡದಂತೆ ಕಟ್ಟುನಿಟ್ಟಿನ ಆದೇಶವನ್ನು ಕರೀನಾ ಸೂಚಿಸಿದ್ದಾರೆ.
ಈ ವಿಚಾರವನ್ನು ಸೈಫ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ನಾನು ಟ್ರೋಲ್ ಹಾಗೂ ಕಮೆಂಟ್ಗಳನ್ನು ಓದುವುದಿಲ್ಲ. ಹಾಗೆ ಓದದೇ ಇದ್ದರೆ ತುಂಬಾನೇ ಕೂಲ್ ಆಗಿ ಇರಬಹುದು. ನನ್ನ ಬಗ್ಗೆ ನಾನೇ ಗೂಗಲ್ನಲ್ಲಿ ಸರ್ಚ್ ಮಾಡಿ ನೋಡಿಕೊಳ್ಳಬಹುದು. ಆದರೆ ಕೆಲ ವಿಚಾರಗಳು ನನಗೆ ಇಷ್ಟವಾಗುವುದಿಲ್ಲ. ಅದು ನನ್ನ ಮೂಡ್ ಹಾಳು ಮಾಡಬಹುದು ಎಂದಿದ್ದಾರೆ.