ಬೆಂಗಳೂರು, ಸ.03 (DaijiworldNews/HR): ಸ್ಯಾಂಡಲ್ವುಡ್ನ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಅವರ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ ಮಾಡಲಾಗಿದೆ.
ಜ್ಯೂನಿಯರ್ ಚಿರುವಿನ ನಾಮಕರಣ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಹಾಗೂ ಆಪ್ತರು ಭಾಗಿಯಾಗಿದ್ದರು. 10 ತಿಂಗಳ ಚಿರು- ಮೇಘನಾ ಪುತ್ರನನ್ನು ಇದುವರೆಗೆ ಜೂನಿಯರ್ ಚಿರು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.
ನಾಮಕರಣದ ಕುರಿತು ನಟಿ ಮೇಘನಾ ಅವರು ತಮ್ಮ ಇನ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಮಗುವಿನ ಹೆಸರನ್ನು ರಾಯನ್ ರಾಜ್ ಸರ್ಜಾ ಎಂದು ಕಾಣಬಹುದು.
ಈ ಹಿಂದೆ ಜ್ಯುನಿಯರ್ ಚಿರುಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದ್ದು,ಮೇಘನಾ ತಂದೆ ಸುಂದರ್ ರಾಜ್ ಅವರು ಚಿಂಟು ಎಂದು ಕರೆಯುತ್ತಿದ್ದರು. ಚಿರು ಬಚ್ಚ, ಚಿರು ಬೇಬಿ, ಶಿಷ್ಯ, ಮಿನಿಮಮ್, ಬರ್ಫಿ, ಕುಟ್ಟಿ ಪಾಪ, ಮಂಚೆ, ಮರಿ ಸಿಂಗ, ಲಿಟ್ಲ್ ಚಿರು, ಸಿಂಬಾ, ದಿಷ್ಟೋ ಎಂಬಿತ್ಯಾದಿ ಹೆಸರುಗಳ ಮೂಲಕ ಕರೆಯುತ್ತಿದ್ದರು.
ಇನ್ನು ಕಳೆದ ವರ್ಷ ಜೂನ್ 7ರಂದು ಚಿರು ನಿಧನರಾಗಿದ್ದು, ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಜ್ಯೂ. ಚಿರು ಆಗಮನದಿಂದ ಮತ್ತೆ ನಗು ಅರಳಿದೆ.