ಮುಂಬೈ, ಆ 27 (DaijiworldNews/PY): "ತಪ್ಪು ಮಾಡಿದ್ದೇನೆ. ಆದರೂ, ಪರವಾಗಿಲ್ಲ" ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಬರೆದುಕೊಂಡಿರುವ ಅವರು, "ತಪ್ಪು ಮಾಡಿದ್ದೇನೆ. ಆದರೂ, ಪರವಾಗಿಲ್ಲ" ಎಂದಿದ್ದಾರೆ.
ಸೋಫಿಯಾ ಲೊರೆನ್ ಅವರ ಪುಸ್ತಕದಿಂದ ಆಯ್ದ ಸಾಲುಗಳನ್ನು ಹಂಚಿಕೊಂಡಿರುವ ಅವರು, "ಕೆಲವು ತಪ್ಪುಗಳನ್ನು ಮಾಡದೇ ನಾವು ಜೀವನವನ್ನು ಆಸಕ್ತಿದಾಯಕವಾಗಿಸಲು ಸಾಧ್ಯವಿಲ್ಲ. ಆದರೆ, ತಪ್ಪುಗಳು ಅಪಾಯಕಾರಿ ಅಥವಾ ಬೇರೆಯವರನ್ನು ನೋಯಿಸಬಾರದು ಎಂದು ಅಂದುಕೊಂಡಿರುತ್ತೇವೆ. ಆದರೆ, ಜೀವನದಲ್ಲಿ ತಪ್ಪುಗಳಾಗುತ್ತವೆ" ಎನ್ನುವ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವ ಮುನ್ನ ಕವಿತಾ ಅವರನ್ನು ವಿವಾಹವಾಗಿ ಲಂಡನ್ನಲ್ಲಿ ನೆಲೆಸಿದ್ದರು. 2006ರಲ್ಲಿ ಕವಿತಾಗೆ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾದರು.