ಮುಂಬೈ, ಆ.19 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋನಲ್ಲಿ ತೀರ್ಫುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪತಿ ರಾಜ್ ಕುಂದ್ರಾ ಬಂಧನವಾದಾಗಿನಿಂದ ಈ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ರಾಜ್ ಕುಂದ್ರಾ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ ಶೋ ಸೆಟ್ಗೆ ಮರಳಿದ್ದಾರೆ.
ಅಶ್ಲೀಲ ಸಿನಿಮಾ ಕೇಸ್ನಲ್ಲಿ ರಾಜ್ ಕುಂದ್ರಾ ಬಂಧಿತರಾದಮೇಲೆ ಚಿತ್ರೀಕರಣ ಹಾಗೂ ರಿಯಾಲಿಟಿ ಕಾರ್ಯಕ್ರಮಗಳ ಶೂಟಿಂಗ್ನಲ್ಲಿ ಭಾಗಿಯಾಗದ ಶಿಲ್ಪಾ ಶೆಟ್ಟಿ ಈಗಷ್ಟೆ ಮನೆಯಿಂದ ಹೊರ ಬಂದಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋಗೆ ಶಿಲ್ಪಾ ಶೆಟ್ಟಿ ಆಗಮಿಸದಿದ್ದಾಗ ಬೇರೆ ಬೇರೆ ಸ್ಟಾರ್ಗಳು ಅವರ ಜಾಗ ತುಂಬಿದ್ದರು. ಆದರೆ ಈಗ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದಿದ್ದರು.