ಮುಂಬೈ, ಆ 18 (DaijiworldNews/PY): ಬಾಲಿವುಡ್ನಲ್ಲಿ 3ಡಿ ಸಿನಿಮಾ ಮಾಡುವ ಬಗ್ಗೆ 2-3 ವರ್ಷಗಳಿಂದ ಮಾತುಗಳು ಕೇಳಿಬರುತ್ತಿವೆ. ಸದ್ಯದಲ್ಲೇ ನಿತೀಶ್ ತಿವಾರಿ ಅವರ ಸಾರಥ್ಯದಲ್ಲಿ ಮಡಿಬರುತ್ತಿರುವ ಬಿಗ್ ಬಜೆಟ್ನ ರಾಮಾಯಣ ಸಿನಿಮಾ ಸೆಟ್ಟೇರಲಿದೆ. ಈ ಮಧ್ಯೆ ಮತ್ತೊಂದು ರಾಮಾಯಾಣ ಸೈಲೆಂಟ್ ಆಗಿ ಪ್ರಿ-ಪ್ರೊಡಕ್ಷನ್ ಕಾರ್ಯವನ್ನು ಆರಂಭಿಸಿದೆ. ಖ್ಯಾತ ನಿರ್ದೇಶಕ ರಾಜಮೌಳಿ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಬರೆಯುತ್ತಿರುವ ರಾಮಾಯಣ ಸದ್ಯದಲ್ಲೇ ಚಿತ್ರೀಕರಣ ಆರಂಭ ಮಾಡುವ ಸಿದ್ದತೆ ಮಾಡಿದೆ. ಸೀತೆ ಪಾತ್ರಕ್ಕೆ ಕರೀನಾ ಕಪೂರ್ ಅವರ ಹೆಸರು ಕೇಳಿಬರುತ್ತಿತ್ತು.
ಈ ನಡುವೆ ಸೀತೆಯಾಗಿ ನಟಿಸಲು ಕರೀನಾ ಕಪೂರ್ ಅವರು ಭಾರೀ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸಂಭಾವನೆಯ ಸುದ್ದಿ ವೈರಲ್ ಆಗುತ್ತಿದ್ದಂತೆ ಕರೀನಾ ಟ್ರೋಲ್ಗೆ ಗುರಿಯಾಗಿದ್ದರು.
ಭಾರತದ ಮಹಾಕಾವ್ಯದ ಪಾತ್ರಕ್ಕೆ ಕರೀನಾ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದು ಸರಿಯಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಸಾಮಾನ್ಯವಾಗಿ ನಟಿ ಕರೀನಾ ಅವರು ಸಿನಿಮಾವೊಂದಕ್ಕೆ 6-8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ, ಸೀತೆ ಪಾತ್ರ ನಿರ್ವಹಿಸಲು 12 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ ಸಿನಿಮಾ ನಿರ್ಮಾಪಕರು ಕರೀನಾರ ಜಾಗಕ್ಕೆ ಬೇರೆ ನಟಿ ಹುಡುಕಲು ಆರಂಭಿಸಿದರು.
ಈ ವಿಚಾರವಾಗಿ ಕರೀನಾಗೆ ಸಾಕಷ್ಟು ಮಂದಿ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ತಾಪ್ಸಿ ಪನ್ನು ಪ್ರತಿಕ್ರಿಯೆ ನೀಡಿದ್ದು, "ಯಾವುದೇ ನಟ ಪೌರಾಣಿಕ ಪಾತ್ರ ಮಾಡಲು ಸಂಭಾವನೆ ಹೆಚ್ಚಿಸಿಕೊಂಡಿದ್ದ ಕಾರಣ ಅದು ಪಾಸಿಟವ್ ಸುದ್ದಿ ಆಗಿರುತ್ತಿತ್ತು. ಯಾರೂ ಕೂಡಾ ಆ ವಿಚಾರವಾಗಿ ಋಣಾತ್ಮಕವಾಗಿ ಮಾತನಾಡುತ್ತಿರಲಿಲ್ಲ. ಆದರೆ, ಓರ್ವ ನಟಿ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಾಗ ಎಲ್ಲರಿಗೂ ಸಮಸ್ಯೆ ಆರಂಭವಾಗುತ್ತದೆ" ಎಂದು ಕೆಂಡಕಾರಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದು, ಕರೀನಾ ಕಪೂರ್ ಮುಂದೇನು?. ಅಮೀರ್ ಖಾನ್ ಜೊತೆ ಒಂದು ಸಿನಿಮಾವಿದೆ. 12 ಕೋಟಿ ಸಂಭಾವನೆ ಪಡೆಯುತ್ತೀರಿ ಎನ್ನುವ ಸುದ್ದಿಯಾಗಿತ್ತು. ಇದಕ್ಕೆ ಅನೇಕರು ಬೆಂಬಲಕ್ಕೆ ನಿಂತರು ಎಂದು ಕೇಳಿದರು. ಇದಕ್ಕೆ ಕರೀನಾ ಹೆಚ್ಚು ಮಾತನಾಡದೇ, "ಹೌದು.. ಹೌದು ಎನ್ನುತ್ತಾ, ಇದು ಸಂಪೂರ್ಣ ಸುಳ್ಳು ಸುದ್ದಿ" ಎಂದಿದ್ದಾರೆ.
ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ಕರೀನಾ ತಿಳಿಸಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.
ಸದ್ಯ ಕರೀನಾ ಕಪೂರ್ ಅವರು ಸಿನಿಮಾಗೆ ರಿ-ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಸಿಕ್ಕಾಪಟ್ಟೆ ದಪ್ಪ ಆಗಿದ್ದ ಕರೀನಾ ತೆಳ್ಳಗಾಗಲು ವರ್ಕೌಟ್ ಮಾಡುತ್ತಿದ್ದಾರೆ. ಕರೀನಾ ಕಪೂರ್ ಅವರು ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಹಾಗೂ ಇಬ್ಬರು ಮಕ್ಕಳೊಂದಿಗೆ ಕರೀನಾ ಪ್ರವಾಸ ಕೈಗೊಂಡಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ.