ಮುಂಬೈ, ಆ.17 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ಕೇಸ್ನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರುತ್ತಿದ್ದಂತೆಯೇ ಇತ್ತ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರು ಟ್ರೋಲ್ ಆಗುತ್ತಿದ್ದಾರೆ.
ಈ ಎಲ್ಲಾ ವಿಷಯಗಳ ನಡುವೆಯೂ ಶಮಿತಾ ಶೆಟ್ಟಿ ಅವರು ಬಿಗ್ ಬಾಸ್ ಓಟಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದ್ದು, ಪ್ರತಿ ಎಪಿಸೋಡ್ನಲ್ಲಿಯೂ ಶಮಿತಾ ಶೆಟ್ಟಿ ಒಂದಿಲ್ಲೊಂದು ಕಾರಣಕ್ಕೆ ಶೈನ್ ಆಗುತ್ತಿದ್ದಾರೆ.
ಇನ್ನು ಬಾಲಿವುಡ್ನಲ್ಲಿ ಶಿಲ್ಪಾ ಶೆಟ್ಟಿ ಮಾಡಿರುವ ಸಾಧನೆ ದೊಡ್ಡದು. ಶಮಿತಾ ಶೆಟ್ಟಿ ಕೂಡ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿದ್ದರೂ ಶಿಲ್ಪಾ ಶೆಟ್ಟಿಯಷ್ಟು ಯಶಸ್ಸು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಅವರಿಗೆ ಸ್ವಂತ ಗುರುತು ಸಿಗಲೇ ಇಲ್ಲ. ಅದು ಶಮಿತಾಗೆ ಪ್ರತಿದಿನ ಕಾಡುತ್ತಿದ್ದು, ಆ ವಿಚಾರವನ್ನು ಹೇಳಿಕೊಂಡು ಬಿಗ್ ಬಾಸ್ ಮನೆಯಲ್ಲಿ ಅತ್ತಿದ್ದಾರೆ.
ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್ ನೋವಿದೆ. ಈ ವೀಕೆಂಡ್ ಎಪಿಸೋಡ್ನಲ್ಲಿ ಅವರು ಆ ನೋವನ್ನು ತೋಡಿಕೊಂಡಿದ್ದಾರೆ.