ಬೆಂಗಳೂರು, ಆ 15 (DaijiworldNews/HR): ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ ಅವರು ತಮ್ಮ ಬಹುಕಾಲದ ಸ್ನೇಹಿತೆ ಅಖಿಲಾ ಜೊತೆಗೆ ಇಂದು ಸಪ್ತಪಥಿ ತುಳಿದಿದ್ದಾರೆ.
ಸರಳವಾಗಿ ಜುಲೈ 4ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಕನಕಪುರ ರಸ್ತೆಯ ತಲಘಟ್ಟಪುರ ಬಳಿ ಇರುವ ಶಿಬ್ರಾವ್ಯಿ ಕೋರ್ಟ್ ಯಾರ್ಡ್ನಲ್ಲಿ ಇಂದು ನವ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಂಸೋರೆ ಅವರು 2014ರಲ್ಲಿ ಮೊದಲು ನಿರ್ದೇಶಿಸಿದ ಹರಿವು ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿದ್ದು, ಹರಿವು ಚಿತ್ರದಲ್ಲಿ ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.
ಇನ್ನು ಮಂಸೋರೆ ಈವರೆಗೂ ಮಾಡಿರುವ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೆ ವಸ್ತುವಿಷಯದ ಆಯ್ಕೆ ಕಾರಣದಿಂದ ಆ ಚಿತ್ರಗಳು ಗಮನ ಸೆಳೆದಿವೆ.