ಹೈದರಬಾದ್, ಆ.08 (DaijiworldNews/HR): ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಹಾಡುಗಳು ವಿವಾದ ಎಬ್ಬಿಸುತ್ತಿದ್ದು, ಇತ್ತೀಚೆಗೆ ಬಿಡುಗಡೆ ಆದ ನಾಲ್ಕು ಪ್ರತ್ಯೇಕ ತೆಲುಗು ಹಾಡುಗಳು ಕೇಳುಗರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಬರ್ಟ್ ಸಿನಿಮಾದ ತೆಲುಗುವಿನಲ್ಲಿ 'ಕಣ್ಣೇ ಅಧಿರಿಂದಿ' ಹಾಡು ಹಾಡಿ ಸಖತ್ ಪೇಮಸ್ ಆಗಿದ್ದ ಮಂಗ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ 'ಬೋನಾಲ ಪಾಟ' ವಿವಾದ ಎಬ್ಬಿಸಿದ್ದು ಈ ಹಾಡಿನ ವಿವಾದ ಇನ್ನೇನು ಅಂತ್ಯವಾಯಿತು ಎಂದುಕೊಳ್ಳುವಾಗಲೇ ಇನ್ನೂ ಕೆಲವು ಹಾಡುಗಳು ವಿವಾದ ಎಬ್ಬಿಸಿವೆ. ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾ ಒಂದರ ಹಾಡು ಹಾಗೂ ಇನ್ನೂ ಬಿಡುಗಡೆ ಆಗದ ಎರಡು ಸಿನಿಮಾದ ಹಾಡುಗಳು ಇದೀಗ ತೆಲುಗು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚೆಗೆ ಬಿಡುಗಡೆಗೊಂಡ 'ಇಪ್ಪುಡು ಕಾಕ ಇಂಕೆಪ್ಪಡು' ಹೆಸರಿನ ಎಂಬ ಶೃಂಗಾರಮಯ ದೃಶ್ಯಗಳನ್ನು ಅತಿಯಾಗಿ ಹೊಂದಿದ್ದ ಸಿನಿಮಾ ಒಂದರಲ್ಲಿ ದೇವರ ನಾಮವೊಂದನ್ನು ಕೆಟ್ಟ ರೀತಿಯಲ್ಲಿ ಬಳಸಲಾಗಿತ್ತು. ಇದು ತೆಲುಗು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇಪ್ಪುಡು ಕಾಕ ಇಂಕೆಪ್ಪುಡು' ಸಿನಿಮಾವು ವಿವಾಹ ಪೂರ್ವ ಲೈಂಗಿಕತೆ ವಿಷಯವನ್ನು ಬಹಳ ಬೋಲ್ಡ್ ಆಗಿ ಬಿಚ್ಚಿಟ್ಟಿತ್ತು. ಸಾಕಷ್ಟು ಶೃಂಗಾರಮಯ ದೃಶ್ಯಗಳು ಸಿನಿಮಾದಲ್ಲಿದ್ದವು. ಸಿನಿಮಾದ ಟ್ರೇಲರ್ನಲ್ಲಿ 'ಭಜ ಗೋವಿಂದಂ' ಹಾಡನ್ನು ಬಳಸಲಾಗಿತ್ತು. ಆದರೆ ಯುವಕ-ಯುವತಿ ಶಂಗಾರ ಕ್ರೀಡೆಯಲ್ಲಿ ತೊಡಗಿರುವ ದೃಶ್ಯಕ್ಕೆ ಹಿನ್ನೆಲೆಯಾಗಿ ಈ ಹಾಡನ್ನು ಬಳಸಿದ್ದರು ನಿರ್ದೇಶಕರು ಹಾಗಾಗಿ ಈ ಹಾಡಿಗೆ ತೀವ್ರ ವಿವಾದ ವಿರೋಧ ವ್ಯಕ್ತವಾಯಿತು.
ಇನ್ನು ಬಿಡುಗಡೆಯಾಗದ 'ಮಹಾಸಮುದ್ರಂ' ಸಿನಿಮಾದ ಹಾಡೊಂದು ಕೂಡ ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾದಲ್ಲಿ ನಟಿ ರಂಭಾ ಬಗ್ಗೆ ಒಂದು ಜಾಲಿಯಾದ ಹಾಡಿದೆ. ಕುಡುಕರು ಮದ್ಯ ಸೇವನೆ ಮಾಡುತ್ತಾ ನಟಿ ರಂಭಾ ಅನ್ನು ಹೊಗಳುವ ಹಾಡದು. ಹಾಡಿನಲ್ಲಿನ ಕೆಲವು ಸಾಲುಗಳ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದು, ಮತ್ತೊಂದು ಸಿನಿಮಾ 'ವರಡು ಕಾವಲೇನು' ಸಿನಿಮಾದಲ್ಲಿ ಭಜನೆ ಹಾಡೊಂದನ್ನು ಐಟಂ ಹಾಡಿಗೆ ಬಳಸಿಕೊಂಡಿದ್ದು ಸಹ ಸಾಕಷ್ಟು ಸುದ್ದಿಯಾಗಿತ್ತು. 'ದಿಗು ದಿಗು ದಿಗು ನಾಗ' ಎಂಬುದು ತೆಲುಗಿನ ಭಜನೆ ಗೀತೆ. ಆದರೆ ಈ ಹಾಡನ್ನು ಸಿನಿಮಾದಲ್ಲಿ ಐಟಂ ಹಾಡಾಗಿ ಬಳಸಲಾಗಿದ್ದು, ತೀವ್ರ ಆಕ್ಷೇಪಗಳು ಕೇಳಿಬಂದಿದ್ದವು.