ಮುಂಬೈ,ಆ.07 (DaijiworldNews/HR): ಬಾಲಿವುಡ್ ನಟಿ ಕಾಜೋಲ್ 47ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರಿಗೆ ಶುಭಾಶಯ ಕೋರಲು ಅಭಿಮಾನಿಯೊಬ್ಬರು ತಂದಿದ್ದ ಕೇಕ್ ತಿನ್ನಲು ನಿರಾಕರಿಸಿದ್ದು, ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಾಜೋಲ್ ಆಗಸ್ಟ್ 5 ರಂದು ಹುಟ್ಟು ಹಬ್ಬದ ಪ್ರಯುಕ್ತ ಅನೇಕ ಅಭಿಮಾನಿಗಳು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದು ನಿಂತ ಕಾಯುತ್ತಿದ್ದು, ಈ ವೇಳೆ ಕಾಜೋಲ್ ತಮ್ಮ ಬಾಡಿಗಾಡ್ರ್ಸ್ ಜೊತೆಗೆ ಹೊರಗೆ ಬಂದು ಕೇಕ್ ಕತ್ತರಿಸುತ್ತಾರೆ.
ಇನ್ನು ವೀಡಿಯೋದಲ್ಲಿ ಕಾಜಲ್ ಅಭಿಮಾನಿಯೊಬ್ಬರು ಕೇಕ್ ತಂದು ಬರ್ತ್ಡೇ ಸಾಂಗ್ ಹೇಳಿ ವಿಶ್ ಮಾಡುತ್ತಾರೆ. ಈ ವೇಳೆ ಕೇಕ್ ಕತ್ತರಿಸಿ ಮನೆಯೊಳಗೆ ಹೋಗುತ್ತಾರೆ. ಅಭಿಮಾನಿಗಳಲ್ಲೊಬ್ಬರು ಒಂದು ಪೀಸ್ ಕೇಕ್ ನೀಡುತ್ತಾರೆ. ಆದರೆ ಕಾಜಲ್ ಅದನ್ನು ಸ್ವೀಕರಿಸದೇ ಬೇಡ ಎಂದು ನಿರಾಕರಿಸುವುದನ್ನು ಕಾಣಬಹುದಾಗಿದ್ದು, ಕಾಜಲ್ರ ಈ ವರ್ತನೆ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.