ಬೆಂಗಳೂರು, ಜು.31 (DaijiworkldNews/HR): ನಟಿ ಸಮಂತಾ ಅಕ್ಕಿನೇನಿ ತಮ್ಮ ಟ್ವಿಟರ್ ಮತ್ತು ಇನ್ಸ್ಸ್ಟಾಗ್ರಾಂನಲ್ಲಿ ಸಮಂತಾ ಅಕ್ಕಿನೇನಿ ಎಂದಿದ್ದ ಹೆಸರನ್ನು 'ಎಸ್' (S) ಎಂದು ಬದಲಾಯಿಸಿಕೊಂಡಿದ್ದು, ಈ ಬಗ್ಗೆ ಅವರ ಸಮಂತಾ ಹಾಗೂ ಅಕ್ಕಿನೇನಿ ಕುಟುಂಬದ ಅಭಿಮಾನಿಗಳಿಗೆ ಅನೇಕ ಪ್ರಶ್ನೆ ಮೂಡಿದೆ.
ಸಮಂತಾ ಅವರು ನಟ ಅಕ್ಕಿನೇನಿ ನಾಗ ಚೈತನ್ಯ ಅವರನ್ನು ಮದುವೆಯಾಗುವುದಕ್ಕೂ ಮುಂಚೆ ಸಮಂತಾ ರುತ್ ಪ್ರಭು ಎಂದು ಹೆಸರನ್ನು ಇಟ್ಟುಕೊಂಡಿದ್ದು, 2017ರಲ್ಲಿ ಮದುವೆಯಾದ ಬಳಿಕ ತಮ್ಮ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು.
ಇನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಸಮಂತಾ ಅಕ್ಕಿನೇನಿ ಎಂದೇ ಗುರುತಿಸಿಕೊಂಡಿದ್ದು, ಇದೀಗ 'ಎಸ್' ಅಕ್ಷರವನ್ನು ಇಟ್ಟುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಆದರೆ ಫೇಸ್ಬುಕ್ನಲ್ಲಿ ಮಾತ್ರ ಸಮಂತಾ ಅಕ್ಕಿನೇನಿ ಎಂದೇ ಉಳಿಸಿಕೊಂಡಿದ್ದಾರೆ.
ಸಮಂತಾ ಶಾಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದು 'ಎಸ್' ಎಂದು ಬದಲಾಯಿಸಿಕೊಂಡಿರಬಹುದು ಎಂದು ಟಾಲಿವುಡ್ ಮಂದಿಯ ಲೆಕ್ಕಚಾರ ಹಾಕಿದ್ದಾರೆ ಎನ್ನಲಾಗಿದೆ.